ಸುಂಟಿಕೊಪ್ಪ, ಮಾ. 14: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಯೇಷಿಯನ್ ವತಿಯಿಂದ ಅಂತರ್ ಜಿಲ್ಲಾಮಟ್ಟದ ಫುಟ್ಬಾಲ್ ತರಬೇತಿ ಶಿಬಿರ ಹಾಗೂ ಆಯ್ಕೆ ಶಿಬಿರವನ್ನು ಗುಡ್ಡೆಹೊಸೂರಿನ ಐಚೆಟ್ಟಿರ ನರೇನ್ ಸುಬ್ಬಯ್ಯ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ನಡೆಸಲಾಯಿತು.

ವಿವಿಧ ಯೂತ್ ಸ್ಪೋಟ್ರ್ಸ್ ಕ್ಲಬ್‍ಗಳಿಂದ 45 ಮಂದಿ ಕ್ರೀಡಾಪಟುಗಳು ಆಗಮಿಸಿದ್ದು, ಆದರಲ್ಲಿ 25 ಮಂದಿಯನ್ನು 3 ದಿನದ ತರಬೇತಿ ಶಿಬಿರಕ್ಕೆ ಆಯ್ಕೆಗೊಳಿಸಲಾಗಿದ್ದು, ಅಂತಿಮವಾಗಿ 16 ಕ್ರೀಡಾಪಟುಗಳನ್ನು ಮಂಡ್ಯದಲ್ಲಿ ನಡೆಯಲಿರುವ ಅಂತರ್ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆ ಮಾಡಲಾಗಿದೆ.

ಫುಟ್ಬಾಲ್ ವ್ಯವಸ್ಥಾಪಕರಾಗಿ ಐ.ಎನ್. ಪೊನ್ನಪ್ಪ, ತರಬೇತುದಾರರಾಗಿ ಮಹೇಂದ್ರ ಕಾರ್ಯನಿರ್ವಹಿಸಿದ್ದರು.