ಸಿದ್ದಾಪುರ, ಮಾ. 14: ಐಪಿಎಲ್ ಮಾದರಿಯ ಕೊಡಗು ಚಾಂಪಿಯನ್ಸ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಆಟಗಾರರ ಅಂತಿಮ ಸುತ್ತಿನ ಬಿಡ್ಡಿಂಗ್ ಪ್ರಕ್ರಿಯೆಯ ಸಮಾರೋಪ ಸಮಾರಂಭ ನಡೆಯಿತು.ಮುಖ್ಯ ಅತಿಥಿಯಾಗಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಭಾಗವಹಿಸಿ ಮಾತನಾಡಿ, ಕೆಸಿಎಲ್‍ನಂತಹ ಕ್ರೀಡಾಕೂಟಗಳು ನಡೆಯುತ್ತಿರುವದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳು ಮುಂದೆ ಬರಲು ಸಾಧ್ಯವಾಗುತ್ತದೆ. ಜಗತ್ತಿನ ಎಲ್ಲಾ ಕ್ರೀಡಾಕೂಟಕ್ಕೂ ಕೊಡಗಿನಿಂದ ಹಲವಾರು ಮಂದಿ ಆಯ್ಕೆಯಾಗಿದ್ದು, ಕ್ರಿಕೆಟ್‍ನಲ್ಲಿ ಮಾತ್ರ ಹಿಂದೆ ಉಳಿದಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸಿ ಅದ್ಭುತ ಕ್ರಿಕೆಟ್ ಆಟಗಾರನನ್ನು ಜಿಲ್ಲೆಯಿಂದ ರಾಜ್ಯ ಮತ್ತು ದೇಶಕ್ಕೆ ನೀಡಬೇಕಾಗಿದೆ. ಸರಕಾರದ ಯೋಜನೆಗಳನ್ನು ಕ್ರೀಡಾಪಟುಗಳು ಸಮರ್ಥವಾಗಿ ಬಳಸಬೇಕು ಎಂದು ಹೇಳಿದರು.

ಇದೇ ಸಂದರ್ಭ 12 ತಂಡಗಳ ಪೂಲ್ ವಿಂಗಡಣಾ ಪ್ರಕ್ರಿಯೆಯನ್ನು ಕೊಡಗು ಪ್ರಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ನೆರವೇರಿಸಿದರು.

ಈ ಸಂದರ್ಭ ಕೆಸಿಎಲ್ ಸಮಿತಿ ಅಧ್ಯಕ್ಷ ಸುರೇಶ್ ಬಿಳಿಗೇರಿ, ಸಂಚಾಲಕ ರೆಜಿತ್ ಕುಮಾರ್ ಗುಹ್ಯ, ಅಜೀಜ್, ಮುಬಾರಕ್, ಸುನಿಲ್, ಪ್ರಮುಖರಾದ ಕಲೀಲ್, ಶೌಕತ್, ಅಸ್ಕರ್ ಸೇರಿದಂತೆ ಮತ್ತಿತರರು ಇದ್ದರು.

274 ಆಟಗಾರರ ಪೈಕಿ 175 ಆಟಗಾರರನ್ನು ವಿವಿಧ ತಂಡಗಳ ಮಾಲೀಕರು ಬಿಡ್ ಮಾಡುವ ಮೂಲಕ ಆಯ್ಕೆ ಮಾಡಿಕೊಂಡರು. ಕೆಸಿಎಲ್ ಮೂರನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟವು ಏಪ್ರಿಲ್ 8 ರಿಂದ 12 ರ ವರೆಗೆ ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.