*ಗೋಣಿಕೊಪ್ಪಲು, ಮಾ. 10: ಅಂತರ್ರಾಷ್ಟ್ರಿಯ ಮಹಿಳಾ ದಿನಾಚರಣೆ ಅಂಗವಾಗಿ ನಿಂಬೆ ಚಮಚ, ಸಂಗೀತ ಕುರ್ಚಿ, ವೇಗದ ನಡಿಗೆ, ಓಟ, ವಿಷದ ಚೆಂಡು, ತಟ್ಟೆ ಎಸೆತ, ಭಾರದ ಗುಂಡು ಎಸೆತ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸ ಲಾಗಿತ್ತು.
ಪೆÇನ್ನಂಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟಕ್ಕೆ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ನಿರ್ದೇಶಕಿ ಲೀಲಾವತಿ ಚಾಲನೆ ನೀಡಿದರು. ತಾ.ಪಂ. ಸದಸ್ಯೆ ಸುಮಾ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮ ನಡೆಯಿತು. ತಾಲೂಕಿನ ವಿವಿಧ ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ಅಧ್ಯಕ್ಷರು ಹಾಗೂ ಪಾದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಹಲವು ಮಹಿಳೆಯರು ಭಾಗವಹಿಸಿದ್ದರು.
100 ಮೀ. ಓಟದ ಸ್ಪರ್ದೆಯಲ್ಲಿ ಸುಕನ್ಯಾ ಜಿ.ಆರ್. ಪ್ರಥಮ, ಮಿಥನ್ ಜಗನ್ ದ್ವಿತೀಯ, ಹಾಜೀರ ತೃತೀಯ ಸ್ಥಾನ ಪಡೆದುಕೊಂಡರು. 35 ರಿಂದ 45 ವರ್ಷದ 100 ಮೀ. ಓಟದ ಸ್ಪರ್ದೆಯಲ್ಲಿ ಮಮತಾ ತಿತಿಮತಿ ಪ್ರಥಮ, ಪ್ರಮೀಳಾ ಕಾಕೂರು ದ್ವಿತೀಯ, ಚಿಮ್ಮು ತಿತಿಮತಿ ತೃತೀಯ ಸ್ಥಾನ ಗಳಿಸಿಕೊಂಡರು.
ವೇಗದ ನಡಿಗೆಯಲ್ಲಿ ದೇವಮ್ಮ ಪೆÇನ್ನಂಪೇಟೆ ಪ್ರಥಮ, ಮೈಮುನಾ ಪೆÇನ್ನಂಪೇಟೆ ದ್ವಿತೀಯಾ ಹಾಗೂ ರಜನಿ ತಿತಿಮತಿ ತೃತೀಯ ಸ್ಥಾನ ಪಡೆದುಕೊಂಡರು. ಸಂಗೀತ ಕುರ್ಚಿ ಕುಸುಮಾ ಪ್ರಥಮ, ಹೆಚ್.ಎಸ್. ಪುಷ್ಪ ದ್ವಿತೀಯ, ಪವಿತ್ರ ಬೆಕ್ಕೆಸೊಡ್ಲುರು ತೃತೀಯ ಸ್ಥಾನಗಳಿಸಿದರು. ನಿಂಬೆ ಚಮಚದಲ್ಲಿ ರೀನಾ ಪೆರುಂಬಾಡಿ ಪ್ರಥಮ, ಪ್ರಮೀಳಾ ಪಾಲಿಬೆಟ್ಟ ದ್ವಿತೀಯ, ಲಕ್ಷ್ಮಿ ತಿತಿಮತಿ ತೃತೀಯ ಪಡೆದರು. ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ಮಮತಾ ಪ್ರಥಮ ಸ್ಥಾನ ಪಡೆದುಕೊಂಡರು. ವಿಷದ ಚೆಂಡು ಸ್ಪರ್ಧೆಯಲ್ಲಿ ರತ್ನ ವಿಠಲ್ ಪೆÇನ್ನಂಪೇಟೆ ಪ್ರಥಮ, ಕುಸುಮಾ ತಿತಿಮತಿ ದ್ವಿತೀಯ, ಮುನ್ನಿ ತಿತಿಮತಿ ತೃತೀಯ ಸ್ಥಾನ ಪಡೆದುಕೊಂಡರು. ತಟ್ಟೆ ಎಸೆತದಲ್ಲಿ ಮೈಮುನಾ ನಲವತ್ತೊಕ್ಲು ಪ್ರಥಮ, ಉಷಾ ಪೆÇನ್ನಂಪೇಟೆ ದ್ವಿತೀಯ, ಸೀತಾ ಲಕ್ಷ್ಮಿ ಹಿರಿಯ ಮೇಲ್ವಿಚಾರಕಿ ತೃತೀಯ ಸ್ಥಾನ ತಮ್ಮ ಮುಡಿಗೇರಿಸಿಕೊಂಡರು. ಭಾರದ ಗುಂಡು ಎಸೆತದಲ್ಲಿ ಉಷಾ ಕುಟ್ಟಂದಿ ಪ್ರಥಮ, ಸೀತಾ ಲಕ್ಷ್ಮಿ ದ್ವಿತೀಯ ಹಾಗೂ ವಿ.ಎ. ಸುಮಿತಾ ಹುದಿಕೇರಿ ತೃತೀಯ ಸ್ಥಾನಗಳಿಸಿಕೊಂಡರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರ ಜಿಲ್ಲಾ ಅಧ್ಯಕ್ಷೆ ಕಾವೇರಮ್ಮ, ತಾಲೂಕು ಅಧ್ಯಕ್ಷೆ ಸುಮಿತ್ರಾ, ಸ್ತ್ರೀ ಶಕ್ತಿ ಒಕ್ಕೂಟ ಬ್ಲಾಕ್ ಅಧ್ಯಕ್ಷೆ ಹಾಗೂ ಜಿಲ್ಲಾ ಖಜಾಂಚಿ ರಜನಿ, ಹಿರಿಯ ಮೇಲ್ವಿಚಾರಕಿ ಸೀತಮ್ಮ ಸೇರಿದಂತೆ ವಿವಿಧ ಮಹಿಳಾ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.