ಶನಿವಾರಸಂತೆ, ಮಾ. 10: ಸಮೀಪದ ಗುಡುಗಳಲೆ ಗ್ರಾಮದ ಬದ್ರಿಯಾ ಮಸೀದಿ ಬಳಿ ಪವಾಡಗಳಿಂದ ಪ್ರಸಿದ್ಧರಾದ ಹಝ್ರತ್ ಫಕೀರ್ ಷಾಹ್ ವಲಿಯುಲ್ಲಾಹಿ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ ಸಮಾರಂಭ ತಾ. 11 ರಂದು (ಇಂದು) ಬೆಳಿಗ್ಗೆ 8 ರಿಂದ ಸಂಜೆ 5ರ ತನಕ ನಡೆಯಲಿದೆ ಎಂದು ಮಸೀದಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.