ಮಡಿಕೇರಿ, ಮಾ.10 : ಇಲಾಖಾ ಸೇವೆಗೆ ನೇಮಕಗೊಳ್ಳುವವರೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತವಾಗಿ ಹತ್ತು ಮಂದಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಮುಂದಾಗಿರುವ ಮಡಿಕೇರಿಯ ಟ್ರೈ ಕಲರ್ ಅಕಾಡೆಮಿ ತಾ.11 ರಂದು (ಇಂದು) ನಗರದಲ್ಲಿ ದ್ವಿತೀಯ ಹಂತದ ಆಯ್ಕಾ ಪರೀಕ್ಷೆ ನಡೆಸಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರೈ ಕಲರ್ ಅಕಾಡೆಮಿಯ ನಿರ್ದೇಶಕಿ ಮೋಕ್ಷಿತ ಪಟೇಲ್ ತಾ.11 ರಂದು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಬೆಳಗ್ಗೆ 11 ಗಂಟೆಗೆ ಆಯ್ಕಾ ಪರೀಕ್ಷೆ ಆರಂಭಗೊಳ್ಳಲಿದ್ದು, ‘ಟಾಪ್ ಟೆನ್’ ಅಭ್ಯರ್ಥಿಗಳ ಅಂತಿಮ ಆಯ್ಕೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಪರೀಕ್ಷಾ ಮಾಹಿತಿ ಮತ್ತು ಕಾರ್ಯಾಗಾರ ನಡೆಯಲಿದ್ದು, ಇದರಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದೆಂದು ಮಾಹಿತಿ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳ ಆಯ್ಕೆಯ ಮೊದಲ ಹಂತದ ಆಯ್ಕಾ ಪರೀಕ್ಷೆ ಸೋಮವಾರಪೇಟೆ, ವೀರಾಜಪೇಟೆ, ಗೋಣಿಕೊಪ್ಪ ಮತ್ತು ಮಡಿಕೇರಿಯ ಮುಖ್ಯ ಪರೀಕ್ಷಾ ಕೇಂದ್ರಗಳಲ್ಲಿ ಕೊಡಗಿನ 13 ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾ.4 ರಂದು ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಒಟ್ಟು 400 ವಿದ್ಯಾರ್ಥಿಗಳು ಪರೀಕ್ಷೆ ಭಾಗವಹಿಸಿ, 100 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರಿಗೆ ದ್ವಿತೀಯ ಹಂತದ ಆಯ್ಕಾ ಪರೀಕ್ಷೆ ನಡೆಯಲಿದೆ.

ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರನ್ನು ಸ್ಥಳೀಯ ಪತ್ರಿಕೆಗಳಲ್ಲಿ ಮತ್ತು ಟ್ರೈಕಲರ್ ಅಕಾಡೆÀಮಿಯ ವೆಬ್ ಸೈಟ್ (ತಿತಿತಿ.ಣಡಿiಛಿoಟouಡಿಚಿಛಿಚಿಜemಥಿ.ಛಿom) ಪ್ರಕಟಿಸಲಾಗುತ್ತದೆ ಎಂದರು.

ಅಕಾಡೆÀಮಿಯ ಪ್ರಮುಖ ವಿನಯ್ ಕುಮಾರ್ ಮಾತನಾಡಿ, ಅಂದಿನ ಕಾರ್ಯಾಗಾರದಲ್ಲಿ ತಜ್ಞರಿಂದ ಬ್ಯಾಂಕಿಂಗ್, ಸಿವಿಲ್ ಸರ್ವಿಸ್, ಸೆಂಟ್ರಲ್ ಗವರ್ನಮೆಂಟ್ ರಿಕ್ರೊಟ್‍ಮೆಂಟ್, ರೈಲ್ವೇಸ್ ಇತ್ಯಾದಿ ವಿಷಯಗಳ ಕುರಿತು ಆಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಪರೀಕ್ಷಾ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರೈಕಲರ್‍ನ ಪ್ರಮುಖರಾದ ಕೆ.ಎಂ.ವಿದ್ಯಾ, ಅರ್ಜುನ್ ದೇವ್ ಹಾಗೂ ಗೌರವ್ ಪಟೇಲ್ ಉಪಸ್ಥಿತರಿದ್ದರು.