ಮಡಿಕೇರಿ, ಮಾ. 10: ಕೊಡಗು ಜಿಲ್ಲೆ ಕಂಡ ಸಂಘಟಕ ಹಾಗೂ ಸಮಾಜಮುಖಿ ಚಳವಳಿಗಳ ಮುನ್ನೆಲೆಯಲ್ಲಿ ನಿಂತು ಹೋರಾಟ ಮಾಡಿದ ಟಿ.ಪಿ. ರಮೇಶ್ ಅವರ ಸಾಧನೆಗಳ ಪರಿಚಯ ಮಾಡಿ ಕೊಡುವ ಉದ್ದೇಶದಿಂದ, ರಮೇಶ್ ಅವರನ್ನು ಹತ್ತಿರದಿಂದ ಬಲ್ಲವರ ಲೇಖನಗಳನ್ನೊಳಗೊಂಡ “ಸಾಧನೆಯ ಹಾದಿಯಲ್ಲಿ” ಎಂಬ ಹಿರಿಯ ಸಾಹಿತಿ ಬಿ.ಎ. ಷಂಶುದ್ದೀನ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಅಭಿನಂದನಾ ಗ್ರಂಥ ಹೊರತರಲಾಗುತ್ತಿದೆ.

ಪೆÇ್ರ. ಬೆಸೂರು ಮೋಹನ್ ಪಾಳೆಗಾರ್, ಡಾ. ಜಿ. ಪ್ರಕಾಶ್, ಡಾ. ಜೆ. ಸೋಮಣ್ಣ ಹಾಗೂ ಡಾ. ಎನ್.ಪಿ. ಕಾವೇರಿ ಪ್ರಕಾಶ್ ಸಂಪಾದಕರಾಗಿರುವ ಗ್ರಂಥವನ್ನು ತಾ. 15 ರಂದು ಬಿಡುಗಡೆ ಮಾಡಲಾಗುವ ದಲ್ಲದೆ, ಅಂದು ಮಡಿಕೇರಿ ಕೆಳಗಿನ ಗೌಡ ಸಮಾಜದಲ್ಲಿ ರಮೇಶ್ ದಂಪತಿಗೆ ಅಭಿನಂದನೆ ಸಲ್ಲಿಸುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟಿ.ಪಿ. ರಮೇಶ್ ಅಭಿನಂದನಾ ಗ್ರಂಥ ಸಮಿತಿ ಸಂಚಾಲಕ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಶ್ರೀ ರಾಘವೇಂದ್ರ ತಂಡದ ಗೀತಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, 10.30ಕ್ಕೆ ನಡೆಯುವ ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೆÇ್ರ. ಎಸ್.ಜಿ. ಸಿದ್ದರಾಮಯ್ಯ ಮಾಡಲಿದ್ದು, ಮಾಜಿ ಸಚಿವ ಯಂ.ಸಿ. ನಾಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷೆ ಡಾ. ಕವಿತಾ ರೈ ಆಶಯ ಮಾತುಗಳನ್ನಾಡಲಿದ್ದು, ಖ್ಯಾತ ಇತಿಹಾಸ ತಜ್ಞ ಡಾ. ಎಂ.ಜಿ. ನಾಗರಾಜ್ “ಸಾಧನೆಯ ಹಾದಿಯಲ್ಲಿ” ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ. ನೀಲಗಿರಿ ತಳವಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಮೈಸೂರಿನ ಸಾಹಿತಿ ಹಾಗೂ ವಿಧ್ವಾಂಸ ಡಾ. ಮಳಲಿ ವಸಂತ ಕುಮಾರ್, ಅರಮೇರಿ-ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸುಳ್ಯ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಎನ್.ಎ. ಜ್ಞಾನೇಶ್ ಭಾಗವಹಿಸಲಿದ್ದಾರೆ.