ಕೂಡಿಗೆ, ಮಾ. 10: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು ಜಿಲ್ಲೆ, ಕ್ರೀಡಾಶಾಲೆಯ ನೇತೃತ್ವದಲ್ಲಿ ಸೋಮವಾರಪೇಟೆ ತಾಲೂಕಿನ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಾ. 11ರಂದು (ಇಂದು) ಜೇನುಕಲ್ಲು ಬೆಟ್ಟಕ್ಕೆ ಚಾರಣ ತೆರಳಲಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಾಕಿ ತರಬೇತುದಾರರಾದ ಕೆ.ಕೆ. ಬಿಂದಿಯಾ, ಅಥ್ಲೇಟಿಕ್ ತರಬೇತುದಾರ ಅಂತೋಣಿ ಡಿಸೋಜ ಪ್ರಕಟಣೆ ತಿಳಿಸಿದ್ದಾರೆ.