ಮಡಿಕೇರಿ, ಮಾ. 9: ನಗರದ ಕಾನ್ವೆಂಟ್ ಜಂಕ್ಷನ್ ಬಳಿ ಮಡಿಕೇರಿ ತಾಲೂಕು ವ್ಯಾಪ್ತಿಯ ಕಂದಾಯ ಇಲಾಖೆಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರೂಪುಗೊಂಡಿರುವ ಮಿನಿ ವಿಧಾನ ಸೌಧದ ಕಟ್ಟಡ ಕಾಮಗಾರಿಗೆ ಈಗಷ್ಟೇ ಕಾಲ ಕೂಡಿ ಬಂದಿದೆ. ಈ ಸಂಬಂಧ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಕೆಲಸ ಮುಂದುವರಿಸಲು ಆದೇಶಿಸಿದ್ದ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಸುಮಾರು 22 ಅಡಿ ಆಳದಿಂದ ಮಣ್ಣು ತೆಗೆದು ಹೊರ ಹಾಕಿ ಕಾಮಗಾರಿ ನಡೆಸಲು ಆದೇಶಿಸಿರುವ ದಾಗಿ ತಿಳಿದು ಬಂದಿದೆ.

ನೂತನ ಮಿನಿ ವಿಧಾನ ಸೌಧಕ್ಕೆ ಗುರುತಿಸಲ್ಪಟ್ಟಿರುವ ನಿವೇಶನಕ್ಕೆ ಹೊಂದಿಕೊಂಡಂತೆ ಈಗಾಗಲೇ ಭಾರತೀಯ ಕ್ರೀಡಾ ಪ್ರಾಧಿಕಾರ ಭವನ ಕಾರ್ಯನಿರ್ವಹಿಸುತ್ತಿದೆ. ಅನತಿ ದೂರದಲ್ಲಿ ಮಡಿಕೇರಿ ನಗರಸ¨ sÉಯಿಂದ ಖಾಸಗಿ ಬಸ್ ನಿಲ್ದಾಣ ಕೆಲಸವು ಭರದಿಂದ ಸಾಗಿದೆ. ಹೀಗಿದ್ದರೂ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ತೊಡರುಗಾಲು ಎದುರಾಗಿತ್ತು. ಇದೀಗ ಈ ನಿವೇಶನದಿಂದ 22 ಅಡಿಗಳಷ್ಟು ಮಣ್ಣನ್ನು ಅಲ್ಲಿಂದ ಹೊರ ಹಾಕಲಾಗುತ್ತಿದೆ.

ಈಗಾಗಲೇ ರೂ. 4.50 ಕೋಟಿ ವೆಚ್ಚದ ಕಾಮಗಾರಿಯನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿ ರೂಪಿಸಿ ಖಾಸಗಿ ಗುತ್ತಿಗೆ ಸಂಸ್ಥೆಗೆ ನೀಡಿತ್ತು. ಆ ಸಂಸ್ಥೆಯು ಸಂಬಂಧಿಸಿದ ಕೆಲ¸ Àವನ್ನು ಒಡಂಬಡಿಕೆ ಮಾಡಿಕೊಂಡು ಉಪ ಗುತ್ತಿಗೆಯಲ್ಲಿ ಬೆಂಗಳೂರಿನ ‘ಕೆಬಿಆರ್ ಇನ್ಫ್ರಾಟೆಕ್’ ಎಂಬ ಉದ್ದಿಮೆಗೆ ವಹಿಸಿಕೊಟ್ಟಿದೆ.

ಆ ಬೆನ್ನಲ್ಲೇ ಸಂಬಂಧಿಸಿದ ನಿವೇಶನದಲ್ಲಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಕೈಗೊಂಡು, ಒಟ್ಟಾರೆ ನಿವೇಶನವನ್ನು ಸಮತಟ್ಟುಗೊಳಿಸಿ, ನಿರ್ಮಾಣ ಕಾಮಗಾರಿಗೆ ಅಗತ್ಯ ನಕಾಶೆಯೊಂದಿಗೆ ಕಾರ್ಯೋನ್ಮುಖ ವಾಗುವಷ್ಟರಲ್ಲಿ ಮಣ್ಣು ಸಮರ್ಪಕ ವಿಲ್ಲವೆಂದು ದೂರುಗಳ ಹಿನ್ನೆಲೆ ತಂತ್ರಜ್ಞರಿಂದ ಮಣ್ಣು ಪರೀಕ್ಷೆ ನಡೆಸಲಾಗಿದೆ. ಈ ದಿಸೆಯಲ್ಲಿ ಮೈಸೂರು ಹಾಗೂ ಸುಳ್ಯದ ತಾಂತ್ರಿಕ ತಜ್ಞರ ಸಲಹೆ ಕೂಡ ಪಡೆಯಲಾಗಿದೆ.

ಈ ವೇಳೆ ಕಟ್ಟಡದ ಅಡಿಪಾಯ ಸಂಬಂಧ, ಮೂಲ ಯೋಜನೆ ವೆಚ್ಚಕ್ಕೆ ಹೆಚ್ಚುವರಿಯಾಗಿ ಸುಮಾರು ರೂ. 85 ಲಕ್ಷದಿಂದ ಒಂದು ಕೋಟಿಯಷ್ಟು ಅಗತ್ಯವೆಂದು ಗುತ್ತಿಗೆದಾರರು ಕಂದಾಯ ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಅಷ್ಟೊಂದು ಅಧಿಕ ಹಣ ಅನಗತ್ಯವೆಂದು ಪ್ರತಿಪಾದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು, ಸುರತ್ಕಲ್ ಇಂಜಿನಿಯರಿಂಗ್ ಸಂಸ್ಥೆಯಿಂದ ಮಣ್ಣು ಪರೀಕ್ಷೆಗೆ ನಿರ್ದೇಶಿಸಿದ್ದರು.

ಅಲ್ಲಿನ ತಂತ್ರಜ್ಞರು ಮಣ್ಣು ಪರೀಕ್ಷೆ ನಡೆಸಿದ ಬಳಿಕ ತಾಂತ್ರಿಕ ಸಲಹೆ ನೀಡುವದರೊಂದಿಗೆ ಕಟ್ಟಡದ ಸುರಕ್ಷಾ ಕಂಬ (ಪಿಲ್ಲರ್) ನಿರ್ಮಿಸುವಾಗ ಕನಿಷ್ಟ 6 ಮೀಟರ್ ಅಳಕ್ಕೆ ಯೋಜನೆ ರೂಪಿಸಲು ಸೂಚಿಸಿದ್ದು, ಈ ನಿಟ್ಟಿನಲ್ಲಿ ಕೆಲಸಕ್ಕೆ ಹಣ ಹೆಚ್ಚುವರಿ ಅಗತ್ಯವಿದೆಯಂತೆ. ಇತ್ತ ಜಿಲ್ಲಾ ಆಡಳಿತದಿಂದ ತೀರಾ ಗೊಸರು ಪ್ರದೇಶವಾಗಿರುವ ಈ ನಿವೇಶನಕ್ಕೆ ಬದಲಿ ಜಾಗ ಒದಗಿಸಿಕೊಡುವದಾಗಿ ಗುತ್ತಿಗೆ ಸಂಸ್ಥೆಗೆ ತಿಳಿಸಿ, ಹಲವು ತಿಂಗಳುಗಳ ಬಳಿಕ ಬೇರೆಲ್ಲಿಯೂ ಸೂಕ್ತ ಜಾಗ ಲಭ್ಯವಿಲ್ಲವೆಂದು ಪ್ರತಿಕ್ರಿಯಿಸಿರುವದಾಗಿ ತಿಳಿದು ಬಂದಿದೆ. ಈ ಎಲ್ಲಾ ವಿಘ್ನಗಳ ನಡುವೆ ಇದೀಗ ಸುರತ್ಕಲ್ ಇಂಜಿನಿಯರಿಂಗ್ ಸಂಸ್ಥೆಯ ತಂತ್ರಜ್ಞರು ನೀಡಿರುವ ಮಣ್ಣು ಪರೀಕ್ಷಾ ವರದಿ ಹಾಗೂ ಸಲಹೆಯಂತೆ, ಮಿನಿ ವಿಧಾನ ಸೌಧ ತಲೆಯೆತ್ತುತ್ತಿರುವ ನಿವೇಶನವನ್ನು ಸರಿ ಸುಮಾರು 22 ಅಡಿಗಳಷ್ಟು ಆಳಕ್ಕೆ ಅಗೆಸುವದರೊಂದಿಗೆ ಯಂತ್ರಗಳನ್ನು ಬಳಸಿಕೊಂಡು ಮಣ್ಣನ್ನು ಬೇರೆಡೆಗೆ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಮಣ್ಣು ಹೊರಹಾಕಲಾಗುತ್ತಿದ್ದು, ಅಲ್ಲಿ ಮಣ್ಣು ತೆಗೆಯುತ್ತಿದ್ದಂತೆ ಒಳಗಿನಿಂದ ನೀರು ಚಿಮ್ಮುತ್ತಿದೆ, ಈ ನೀರನ್ನು ಮೋಟಾರು ಯಂತ್ರದಿಂದ ಹೊರ ಹಾಕಿ ಬಳಿಕ ಅಲ್ಲಿಂದಲೇ ಅಡಿಪಾಯ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.

ಹೀಗಾಗಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣದ ಮೂಲ ಯೋಜನೆಯಲ್ಲಿ ಅಂದಾಜು ರೂ. 4.50 ಕೋಟಿ ವೆಚ್ಚದ ಕಾಮಗಾರಿ ಯೊಂದಿಗೆ, ಈಗಿನ ಕೆಲಸಕ್ಕೆ ಹೆಚ್ಚುವರಿ ಹಣ ಅಗತ್ಯವಿದ್ದು, ಸರಕಾರದ ನಿರ್ದೇಶನದಂತೆ ಗುತ್ತಿಗೆದಾರರು ಕೆಲಸ ಮುಂದುವರಿಸಿದ್ದಾರೆ.

20 ಅಡಿಗಳಷ್ಟು ಆಳದಿಂದ ಅಡಿಪಾಯ ಕೆಲಸ ಪೂರೈಸಿದ ಬಳಿಕ ಮಿನಿ ವಿಧಾನ ಸೌಧ ಕಟ್ಟಡದ ಮೊದಲ ಹಂತದ ಕಾಮಗಾರಿಯಾಗಿ ನೆಲ ಅಂತಸ್ತು ಹಾಗೂ ಮೊದಲನೆಯ ಮಹಡಿ ಕಟ್ಟಡವನ್ನು ಕೈಗೊಳ್ಳಲಾಗುವ ಉದ್ದೇಶವಿದೆ ಎಂದು ಗುತ್ತಿಗೆದಾರರು ಮಾಹಿತಿ ನೀಡಿದ್ದಾರೆ.

ಅಲ್ಲದೆ ಮೊದಲ ಹಂತದಲ್ಲಿ ಕಟ್ಟಡದೊಂದಿಗೆ ನೆಲ ಮಳಿಗೆಯಲ್ಲಿ ಜಿಲ್ಲಾ ಆಡಳಿತ ಭವನದ ಮಾದರಿ ಯೊಂದಿಗೆ ವಾಹನ ನಿಲುಗಡೆ ವ್ಯವಸ್ಥೆ, ಹೂದೋಟ ಇತ್ಯಾದಿ ಕೆಲಸ ಕೈಗೊಳ್ಳ ಲಾಗುವದು ಎಂದು ವಿವರಿಸಿದ್ದಾರೆ. ಒಟ್ಟಿನಲ್ಲಿ ಹಲವು ರೀತಿಯ ಎಡರು ತೊಡರುಗಳ ನಡುವೆಯೂ ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿಗೆ ಚಾಲನೆ ಲಭಿಸಿದ್ದು, ಬೇಸಿಗೆಯ ನಡುವೆ ಎದುರಾಗಿರುವ ನಿವೇಶನದ ಗೊಸರು ಹೊರಹಾಕುವಲ್ಲಿ ಗುತ್ತಿಗೆದಾರರು ಯಾವ ರೀತಿ ಸಫಲರಾಗಿ ಅಡಿಪಾಯ ರೂಪಿಸುತ್ತಾರೆ ಎಂದು ಇನ್ನಷ್ಟೇ ತಿಳಿಯಬೇಕಿದೆ.