ಮಡಿಕೇರಿ, ಮಾ. 9 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಪ್ರೆಸ್‍ಕ್ಲಬ್‍ನ ಸಹಕಾರದೊಂದಿಗೆ ತಾ. 30 ರಂದು ಮಡಿಕೇರಿಯ ರಾಜಾಸೀಟ್‍ನಲ್ಲಿ ಹೊಸ ವರ್ಷದ ಜಿಲ್ಲಾ ಮಟ್ಟದ ಯುಗಾದಿ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಆಸಕ್ತ ಕವಿಗಳು ತಮ್ಮ ನೂತನ ಕವನವನ್ನು ಸ್ವವಿಳಾಸದೊಂದಿಗೆ ಯುಗಾದಿ ಕವಿಗೋಷ್ಠಿ ಎಂದು ಅಂಚೆ ಲಕೋಟೆಯ ಮೇಲೆ ನಮೂದಿಸಿ ತಾ. 22 ರೊಳಗೆ ಮಡಿಕೇರಿಯ ಕೋಟೆ ಆವರಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ ತಲುಪಿಸಬೇಕೆಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ 8277066123 ಸಂಪರ್ಕಿಸಬಹುದಾಗಿದೆ.