ಸೋಮವಾರಪೇಟೆ, ಮಾ. 9: ತಾಲೂಕಿನ ಗರ್ವಾಲೆ, ಬೆಟ್ಟದಳ್ಳಿ, ಶಾಂತಳ್ಳಿ, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸಂಚಾರಿ ನ್ಯಾಯಬೆಲೆ ವಾಹನ ಹಳೆಯದಾಗಿದ್ದು ಅನಾಹುತ ಸಂಭವಿಸುವ ಮೊದಲೇ ಬದಲಾಯಿಸಬೇಕೆಂದು ನಾಲ್ಗುಡಿ ಸಂಸ್ಥೆಯ ಸಂಚಾಲಕ ಚಾಮೇರ ದಿನೇಶ್ ಆಗ್ರಹಿಸಿದ್ದಾರೆ.

ಈ ಸಂಚಾರಿ ವಾಹನಕ್ಕೆ ಸುಸ್ಥಿರ ಪ್ರಮಾಣ ಪತ್ರವೂ ಇಲ್ಲ. ಈ ಗ್ರಾಮಗಳು ಗುಡ್ಡಗಾಡು ಪ್ರದೇಶವಾಗಿರುವದರಿಂದ ಕಡಿದಾದ ರಸ್ತೆಯಲ್ಲಿ ವಾಹನ ತೆರಳಬೇಕಾಗಿದೆ. ಸರಿಯಾದ ಸಮಯಕ್ಕೆ ವಾಹನ ಗ್ರಾಮಗಳಿಗೆ ತಲುಪದಿರುವ ಕಾರಣ ಜನರಿಗೆ ಸಮಸ್ಯೆ ಎದುರಾಗಿದೆ. ವಾಹನ ಬದಲಾಯಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಯು.ಟಿ. ಖಾದರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ತಕ್ಷಣ ಸ್ಪಂದಿಸಬೇಕೆಂದು ಚಾಮೇರ ದಿನೇಶ್ ಒತ್ತಾಯಿಸಿದ್ದಾರೆ.