ಆಲೂರು ಸಿದ್ದಾಪುರ, ಮಾ. 9: ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶ ತಾ. 10ರಂದು (ಇಂದು) ಸಮುದಾಯ ಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಜೆಡಿಎಸ್ ಮುಖಂಡ ಕೋಳಿಬೈಲು ಬೋಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಮಾವೇಶವನ್ನು ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಉದ್ಘಾಟಿಸುವರು. ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿಸಿಲ್ವ, ಶನಿವಾರಸಂತೆ ಹೋಬಳಿ ಅಧ್ಯಕ್ಷ ಆದಿಲ್‍ಪಾಷ, ಜೆಡಿಎಸ್ ಮುಖಂಡರಾದ ಡಾ. ಯಾಲದಾಳು ಮನೋಜ್‍ಬೋಪಯ್ಯ, ರಾಜಾರಾವ್, ಹೊಸೂರು ಸತೀಶ್ ಜೋಯಪ್ಪ, ಎಚ್.ಪಿ. ಶೇಷಾದ್ರಿ, ಎನ್.ಬಿ. ನಾಗಪ್ಪ, ಯು ಜನತಾದಳದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ಹೆಚ್.ಬಿ. ಜಯಮ್ಮ, ಡಿ.ಪಿ. ಬೋಜಪ್ಪ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಿದೆ.