ಮಡಿಕೇರಿ, ಮಾ. 9: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ‘‘ಪೊಂಗುರಿ’’ ಎಂಬ ತ್ರೈಮಾಸಿಕ ಸಂಚಿಕೆಯನ್ನು ಹೊರತರುತ್ತಿದೆ. ಈ ಸಂಚಿಕೆಯನ್ನು ಆಕರ್ಷಕ ಹಾಗೂ ಅರ್ಥಪೂರ್ಣವಾಗಿ ಪ್ರಕಟಿಸಲು ನೂತನ ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಸಂಚಿಕೆಗೆ ಲೇಖಕರು, ತಜ್ಞರಿಂದ ಲೇಖನ ಆಹ್ವಾನಿಸಲಾಗಿದೆ. ಸಣ್ಣ ಕಥೆ, ಕವನ, ಚುಟುಕ, ವೈಚಾರಿಕ ಲೇಖನ, ಅಧ್ಯಯನ ಲೇಖನ, ಲಲಿತ ಪ್ರಬಂಧ, ಜಾನಪದ ಕುರಿತ ಬರಹಗಳನ್ನು ಕೊಡವ ಭಾಷೆಯಲ್ಲಿ ಕಳುಹಿಸಿಕೊಡುವಂತೆ ಕೋರಲಾಗಿದೆ. ಕಳುಹಿಸುವ ಲೇಖನಗಳು ಎಲ್ಲಿಯೂ ಪ್ರಕಟವಾಗಿರಬಾರದು. ಲೇಖನದಲ್ಲಿ ಹೆಸರು, ಸಹಿ, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದಿರಬೇಕು. ಡಿಟಿಪಿ ಇಲ್ಲವೇ ಓದಲು ಸಾಧ್ಯವಾಗುವಂತೆ ಸ್ಪಷ್ಟವಾಗಿ ಬರೆದಿರಬೇಕು. ಇಂತಹ ಲೇಖನಗಳನ್ನು ತಾ.25ರ ಒಳಗಾಗಿ ಸಂಪಾದಕರು, ಪೊಂಗುರಿ ಸಂಚಿಕೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ಸ್ ಭವನ, ಜಿಲ್ಲಾ ಕ್ರೀಡಾಂಗಣ, ಮಡಿಕೇರಿ ಕೊಡಗು ಜಿಲ್ಲೆ- 571201 ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಸೂಕ್ತ ಲೇಖನಗಳಿಗೆ ಗೌರವ ಸಂಭಾವನೆ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ : 08272-229074, ರಿಜಿಸ್ಟ್ರಾರ್- 9481149135, ಪೊಂಗುರಿ ಸಂಪಾದಕರು- 9483049005ನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.