ಮಡಿಕೇರಿ, ಮಾ. 9: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ 2018ರ ಅಂತರ ಕಾಲೇಜು ಸಿಬ್ಬಂದಿ ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಾವಳಿಯ ಉದ್ಘಾಟನೆಯು ತಾ. 10ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ನಗರದ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಹಾಕಿ ಕ್ಲಬ್‍ನ ಅಧ್ಯಕ್ಷ ನವೀನ್ ಬೆಳ್ಳಿಯಪ್ಪ, ಸಹಕಾರ ಸಂಘದ ನಿರ್ದೇಶಕ ಗಣೇಶ್, ಎಫ್.ಎಂ.ಸಿ ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಇತರರು ಭಾಗವಹಿಸಲಿದ್ದಾರೆ.