ಮೇಕೇರಿ ಸಾಯಿ ಮಂದಿರಕ್ಕೆ ರಾಜ್ಯಾಧ್ಯಕ್ಷರ ಭೇಟಿ ಮಡಿಕೇರಿ, ಮಾ. 9 : ಮೇಕೇರಿಯಲ್ಲಿ ಸುಮಾರು ರೂ. 80 ಲಕ್ಷ ವೆಚ್ಚದಲ್ಲಿ ಸಾಯಿ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ರೂ. 65 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಈ ಹಿಂದೆ ಮಂದಿರದ ಭೂಮಿ ಪೂಜೆಗೆ ಆಗಮಿಸಿದ್ದ ಕರ್ನಾಟಕ ರಾಜ್ಯ ಸತ್ಯಸಾಯಿ ಸೇವಾ ಸಮಿತಿ ರಾಜ್ಯಾಧ್ಯಕ್ಷ ನಾಗೇಶ್ ದಾಕಪ್ಪ ಕಾಮಗಾರಿ ವೀಕ್ಷಣೆಗೆ ತಾ. 10 ರಂದು (ಇಂದು) ಭೇಟಿ ನೀಡಲಿದ್ದಾರೆ.

ಮಡಿಕೇರಿ ನಾಯ್ಡು ಬೇಕರಿ ಕುಟುಂಬಸ್ಥರಾದ ಗಜರಾಜ ನಾಯ್ಡು ಶ್ರೀ ಸತ್ಯಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷರಾಗಿದ್ದು, ಸುಮಾರು 72 ಸೆಂಟ್ ನಿವೇಶನವನ್ನು ಉದಾರವಾಗಿ ನೀಡಿದ್ದಾರೆ. 2006 ರಿಂದ ಕಾಮಗಾರಿ ಆರಂಭಗೊಂಡಿದ್ದು, ಇನ್ನೂ ಸುಮಾರು ರೂ. 15 ಲಕ್ಷ ವೆಚ್ಚದ ಕಾಮಗಾರಿ ಬಾಕಿ ಇದೆ. ದಾನಿಗಳಿಂದ ಸಂಗ್ರಹವಾದ ಹಣದಿಂದ ಮಂದಿರ ನಿರ್ಮಾಣ ಮುಕ್ತಾಯ ಹಂತದಲ್ಲಿದ್ದು, ತಾ. 10 ರಂದು ಅಪರಾಹ್ನ 3 ಗಂಟೆಗೆ ಮೇಕೇರಿಗೆ ರಾಜ್ಯಾಧ್ಯಕ್ಷ ನಾಗೇಶ್ ದಾಕಪ್ಪ ಭೇಟಿ ನೀಡಲಿದ್ದಾರೆ.