ಸುಂಟಿಕೊಪ್ಪ, ಮಾ.8 : ಕಾರಿನಲ್ಲಿ ಬಂದ ನಾಲ್ವರು ಗಾಂಜಾ ಮಾರಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಕೊಯಮತ್ತೂರಿನ ಪೊನ್ನಾಚಿ ದೇವಿನಗರದ ಗೌತಮ್, ಕೊಯಮತ್ತೂರಿನ ಕೆ.ಪಿ.ರಿಜೇಸ್, ಜೆ.ದಿನೇಶ್ ಹಾಗೂ ನೀಲಗಿರಿಯ ಸುಕುಮಾರ್ ಜೂಮ್ ಕಂಪೆನಿಯ ಜೆನ್ ಕಾರು (ಕೆಎ03-8412) ನಲ್ಲಿ 400 ಗ್ರಾಂ ಒಣಗಿದ ಗಾಂಜಾ ಪುಡಿಯನ್ನು ತಂದು ಇಲ್ಲಿನ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಕಾರನ್ನು ನಿಲ್ಲಿಸಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ಸುಂಟಿಕೊಪ್ಪ ಪೊಲೀಸರಿಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆದಿದೆ.
ಆರೋಪಿಗಳಲ್ಲಿ ಓರ್ವ ಕೆಲ ಸಮಯಗಳಿಂದ ಸುಂಟಿಕೊಪ್ಪದಲ್ಲಿ ನೆಲೆಸಿದ್ದ ಎನ್ನಲಾಗಿದೆ. ಪೊಲೀಸರು ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.