ಸೋಮವಾರಪೇಟೆ,ಮಾ.7: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯಿಲ್ಲಿ ವಾಟರ್‍ಮೇನ್ ಆಗಿ ಕೆಲಸ ಮಾಡುತ್ತಿದ್ದ ಆಲೇಕಟ್ಟೆ ನಿವಾಸಿ ಕೃಷ್ಣ (36) ಅವರು ತಾ. 7 ರಂದು ಹೃದಯಾಘಾತದಿಂದ ನಿಧನರಾದರು.

ನಿನ್ನೆ ರಾತ್ರಿ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ತೆರಳುವಂತೆ ವೈದ್ಯರು ಸಲಹೆ ನೀಡಿದ್ದರು.

ಚಿಕಿತ್ಸೆಯ ನಂತರ ಸ್ವಲ್ಪ ಚೇತರಿಸಿ ಕೊಂಡಿದ್ದ ಕೃಷ್ಣ ಅವರು ಮನೆಗೆ ಮರಳಿದ್ದು, ಇಂದು ಮಡಿಕೇರಿಗೆ ತೆರಳುವದಾಗಿ ತಿಳಿಸಿದ್ದರು. ಮುಂಜಾನೆ 6 ಗಂಟೆ ವೇಳೆಗೆ ಎದೆ ನೋವು ತೀವ್ರಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣ ಅವರು ಪತ್ನಿ ಸೇರಿದಂತೆ ಒಂದೂವರೆ ವರ್ಷದ ಮಗುವನ್ನು ಅಗಲಿದ್ದಾರೆ. ಆಲೇಕಟ್ಟೆ ಭಾರತೀಯ ಯುವಕ ಸಂಘದ ನಿರ್ದೇಶಕರಾಗಿದ್ದ ಕೃಷ್ಣ ಅವರ ನಿಧನಕ್ಕೆ ಸಂಘವು ಸಂತಾಪ ಸೂಚಿಸಿದೆ.