ವೀರಾಜಪೇಟೆ: ಹುಣಸೂರು-ತಲಕಾವೇರಿ ಮುಖ್ಯ ರಸ್ತೆಯ ಕಡಂಗಮರೂರು ಗ್ರಾಮದ ಬೆಳ್ಳುಮಾಡು ಜಂಕ್ಷನ್ನಿಂದ ಪಾರಾಣೆ ಗ್ರಾಮದವರೆಗೆ ಕೊಡಗು ಪ್ಯಾಕೇಜ್ನ ರೂ. 7 ಕೋಟಿ ಅನುದಾನದ 11 ಕಿ.ಮೀ. ರಸ್ತೆ ಅಗಲಿಕರಣ ಮತ್ತು ಡಾಂಬರಿಕರಣ ಕಾಮಗಾರಿಗೆ ತಾ.ಪಂ. ಸದಸ್ಯ ಮಾಳೇಟಿರ ಪ್ರಶಾಂತ್ ಚಾಲನೆ ನೀಡಿದರು.
ಬೆಳ್ಳುಮಾಡು ಜಂಕ್ಷನ್ನಿಂದ ಪಾರಾಣೆ ಕೈಕಾಡು ಮೂಲಕ ನಾಪೋಕ್ಲು, ಪಾರಾಣೆಯಿಂದ ಬಲಮುರಿಗಾಗಿ ಮೂರ್ನಾಡು ಸಂರ್ಪಕಿಸುವ ಮುಖ್ಯ ರಸ್ತೆ ಇದಾಗಿದೆ. ಇಂದಿನಿಂದ ಕಾಮಗಾರಿಗೆ ಚಾಲನೆ ದೊರೆತಿದ್ದು, ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಗುಣಮಟ್ಟದೊಂದಿಗೆ ಪೂರ್ತಿಗೊಳಿಸುವದು ಗುತ್ತಿಗೆದಾರರ ಹೊಣೆ ಎಂದು ಪ್ರಶಾಂತ್ ಹೇಳಿದರು.
ಈ ಸಂದರ್ಭ ಕಾಕೋಟುಪರಂಬು ಗ್ರಾ.ಪಂ. ಉಪಾಧ್ಯಕ್ಷೆ ಮುಕ್ಕಾಟಿರ ವಿನಿತ ಕಾವೇರಮ್ಮ , ಗ್ರಾ.ಪಂ. ಸದಸ್ಯ ಮಂಡೇಟಿರ ಅನಿಲ್, ಕುಂಞಅಬ್ದುಲ್ಲ, ಕಾಕೋಟುಪರಂಬು ಕಾಂಗ್ರೆಸ್ ವಲಯ ಮಹಿಳಾ ಘಟಕದ ಅಧ್ಯಕ್ಷೆ ಹವಾಮ, ಉಪಾಧ್ಯಕ್ಷೆ ಕಾಂಗೀರ ಪುಷ್ಪ ಬೋಪಣ್ಣ, ಕಡಂಗಮರೂರು ಬೂತ್ ಸಮಿತಿ ಅಧ್ಯಕ್ಷ ಮಂಡೇಪಂಡ ರೋಶನ್, ಸ್ಥಳೀಯ ಕಾಂಗ್ರೆಸ್ ಪ್ರಮುಖರಾದ ಬಿ. ಮಾದಪ್ಪ ಕಾಂಗೀರ ಸತೀಶ್ , ಮಲ್ಲಂಡ ಜಗದೀಶ್ ಹಾಗೂ ಗುತ್ತಿಗೆದಾರ ವೇಣು ಉಪಸ್ಥಿತರಿದ್ದರು.ಕೂಡಿಗೆ: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಮತ್ತು ಮೂಡಲಕೊಪ್ಪಲು ರಸ್ತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನದಲ್ಲಿ ಕಾವೇರಿ ನೀರಾವರಿ ನಿಗಮದ ಮುಖೇನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಹಾಗೂ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದ ಗ್ರಾಮಸ್ಥರ ಜಮೀನಿಗೆ ಜೋಡಣೆಯ ರೂ. 1.85 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ್, ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್ ಸೇರಿದಂತೆ ಈ ವ್ಯಾಪ್ತಿಯ ಸದಸ್ಯರು, ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ನಾಗರಾಜ್ ಇದ್ದರು.ಸಿದ್ದಾಪುರ: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ವಾಲ್ನೂರು ಗ್ರಾಮದ ಪೈಸಾರಿ ಕೆರೆ ಅಭಿವೃದ್ಧಿಗೆ ರೂ. 2.80 ಲಕ್ಷ ವೆಚ್ಚದಲ್ಲಿ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಭುವನೇಂದ್ರ, ಕಮಲಮ್ಮ, ದಿನೇಶ್, ಗುತ್ತಿಗೆದಾರ ಅಂಬುದಾಸ್ ಸೇರಿದಂತೆ ಇನ್ನಿತರರು ಇದ್ದರು.