ಗೋಣಿಕೊಪ್ಪ ವರದಿ: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಹಯೋಗದಲ್ಲಿ ಅಲ್ಲಿನ ಮೈದಾನದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈಸೂರು ವಲಯ ಅಂತರ್ ಕಾಲೇಜುಗಳ ವಾಲಿಬಾಲ್ ಟೂರ್ನಿ ಕಪ್‍ನ್ನು ಮೈಸೂರು ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ ಗೆದ್ದುಕೊಂಡಿದೆ. ಮಂಡ್ಯ ಪಿಇಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ತಂಡವು ಫೈನಲ್‍ನಲ್ಲಿ ಸೋಲನುಭವಿಸಿ ದ್ವಿತೀಯ ಸ್ಥಾನ ಅಲಂಕರಿಸಿದೆ.

ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಹಯೋಗದಲ್ಲಿ ಅಲ್ಲಿನ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೈಸೂರು ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವು ಮಂಡ್ಯ ಪಿಇಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ತಂಡವನ್ನು 25-24, 20-25, 16-14 ಅಂಕಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಸೆಮಿಫೈನಲ್‍ನಲ್ಲಿ ಮಂಡ್ಯ ಪಿಇಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ತಂಡವು ಎನ್‍ಐಇ ತಂಡವನ್ನು 22-25, 25-13, 15-13 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಮೈಸೂರು ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವು ಮೈಸೂರು ಎಸ್‍ಜೆಸಿಇ ತಂಡವನ್ನು 25-21, 25-22 ಅಂಕಗಳಿಂದ ಸೋಲಿಸಿ ಫೈನಲ್‍ಗೆ ಲಗ್ಗೆ ಇಟ್ಟಿತು.

ಕ್ವಾಟರ್ ಫೈನಲ್‍ನಲ್ಲಿ ಮೈಸೂರು ಎಸ್‍ಜೆಸಿಇ ತಂಡವು ಕೆ.ಆರ್. ಪೇಟೆ ಜಿಎಸಿ ತಂಡವನ್ನು 21-25, 25-22, 15-10 ಅಂಕಗಳಿಂದ ಸೋಲಿಸಿತು. ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವು ಮೈಸೂರು ವಿವಿಐಟಿಇ ತಂಡವನ್ನು 25-19, 25-27, 16-14 ಅಂಕಗಳಿಂದ ಮಣಿಸಿತು.

ಕುಶಾಲನಗರ ಜಿಇಸಿ ತಂಡವು ಮೈಸೂರು ವಿವಿಸಿಇ ತಂಡವನ್ನು 25-15, 25-19 ಅಂಕಗಳಿಂದ ಸೋಲಿಸಿತು. ಸಂಜೆ ನಡೆದ ಸಮಾರೋಪದಲ್ಲಿ ಕೊಡವ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ, ಖಜಾಂಚಿ ಕೆ.ಎನ್. ಉತ್ತಪ್ಪ, ಪ್ರಾಂಶುಪಾಲ ಡಾ. ಪಿ. ಮಹಾಭಲೇಶ್ವರಪ್ಪ ಹಾಗೂ ಡಿಒಎಸ್‍ಪಿಇ ಉಖ್ಯಸ್ಥೆ ಡಾ. ವೆಂಕಟೇಶ್, ಟೂರ್ನಿ ಪ್ರಚಾರ ಸಮಿತಿ ಸಂಚಾಲಕ ಎಂ.ಜಿ. ರಾಮನಾಥ್ ಕಿಣಿ ಬಹುಮಾನ ವಿತರಿಸಿದರು.