ಮಡಿಕೇರಿ, ಮಾ. 7 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಭತ್ತದ ಗದ್ದೆಗಳ ಭೂ ಪರಿವರ್ತನೆ, ಹೊರ ಜಿಲ್ಲೆಯವರ ಭೂ ಖರೀದಿ ಮತ್ತು ಭೂ ಮಂಜೂರಾತಿಯಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆÉಗೆ ಆಗ್ರಹಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಈ ಸಂಬಂಧ ತಿಂಗಳ ಒಳಗಾಗಿ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ದೇವರ ಸ್ವರ್ಗವೆಂದೇ ಹೆಸರಾಗಿರುವ ಕೊಡಗು ಜಿಲ್ಲೆಯ ಭೂಮಿ ಇಂದು ಅಕ್ರಮವಾಗಿ ಪರರ ಪಾಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ದೇವರ ನೆಲೆಬೀಡು ಎಂದು ಕರೆಯಲಾಗುವ ನೆರೆಯ ಕೇರಳ ರಾಜ್ಯದಲ್ಲಿ ಭೂಮಿ ಮತ್ತು ಪರಿಸರಕ್ಕೆ ಹೆಚ್ಚಿನ ಗೌರವ ನೀಡಲಾಗುತ್ತದೆ. ಮರವೊಂದನ್ನು ಕಡಿಯುವ ಸಂದರ್ಭ ಪೂಜೆಯನ್ನು ಸಲ್ಲಿಸುವ ಮೂಲಕ ಅಲ್ಲಿನ ಜನ ಪ್ರಕೃತಿಗೆ ಗೌರವವನ್ನು ತೋರುತ್ತಾರೆ. ಆದರೆ ಪವಿತ್ರ ನೆಲ ಕೊಡಗಿನಲ್ಲಿ ಭೂಮಿಗೆ ಪೂಜ್ಯಭಾವವೇ ಇಲ್ಲದಾಗಿದ್ದು, ಕೇವಲ ವ್ಯಾಪಾರಿ

(ಮೊದಲ ಪುಟದಿಂದ) ಮನೋಭಾವನೆÀ ಮನೆ ಮಾಡಿದೆ ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.

ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬಂದ ಭೂ ಸುಧಾರಣಾ ಕಾಯ್ದೆ ಮತ್ತು ಭೂ ಕಂದಾಯ ಕಾಯ್ದೆಯ ತಿದ್ದುಪಡಿಯ ಬಳಿಕ ಇಲ್ಲಿಯವರೆಗೆ ಸುಮಾರು 24 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರಬಹುದಾದ ಭೂ ವಹಿವಾಟಿನ ಅಕ್ರಮ ವ್ಯವಹಾರಗಳ ಮಾಹಿತಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಮುಂದಿನ ಒಂದು ತಿಂಗಳೊಳಗೆ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನೆ ದೊರೆಯದೆ ಇದ್ದಲ್ಲಿ ಕಾನೂನಿನ ಮೊರೆ ಹೋಗುವದಾಗಿ ಎಚ್ಚರಿಕೆ ನೀಡಿದರು.

ಭೂ ಮಾಫಿಯಾ, ಮಧ್ಯವರ್ತಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಭೂದಂಧೆಯ ರಾಕೆಟ್ ಜಾಲವೊಂದು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ ನಾಚಪ್ಪ, ಹೊರ ಜಿಲ್ಲೆಯ ಕೃಷಿಕರಲ್ಲದ ಪ್ರಭಾವಿಗಳು, ಕಾಳಸಂತೆಕೋರರು ತಾವು ಕೃಷಿಕರೆನ್ನುವ ನಕಲಿ ಪ್ರಮಾಣ ಪತ್ರ ಸೃಷ್ಟಿಸಿ ಭೂಮಿ ಖರೀದಿಸುತ್ತಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ, ಕರ್ನಾಟಕ ಭೂ ಸುಧಾರಣ ಮಸೂದೆಯನ್ನು ಉಲ್ಲಂಘಿಸಲಾಗುತ್ತಿದೆ. ಈ ಅಕ್ರಮ ಆಸ್ತಿಗಳ ನೋಂದಣಿ ಪ್ರಕ್ರಿಯೆ ಬ್ರೋಕರ್‍ಗಳು ಹಾಗೂ ಡೀಲ್ ಸಂಘಟನೆಗಳ ಮೂಲಕ ಸುಲಭವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಭೂ ಹೀನ ಬಡವರಿಗೆ, ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಭೂಹಂಚಿಕೆ ಮಾಡುವದಕ್ಕೆ ನಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಅಕ್ರಮ ಭೂಮಂಜೂರಾತಿ ಉಳ್ಳವರ ಪಾಲಾಗುತ್ತಿರುವದನ್ನು ಖಂಡಿಸುವದಾಗಿ ಹೇಳಿದರು.

ಜಿಲ್ಲೆಯ ರೈತರಿಗೆ ಹಾಗೂ ಅರ್ಹ ಫಲಾನುಭವಿಗಳ ಭೂಮಿಗೆ ಸಂಬಂಧಿಸಿದ ಕಡತಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ. ಆದರೆ ಪ್ರಭಾವಿಗಳು, ದಂಧೆಕೋರರು, ಭೂ ಮಾಫಿಯಾ ಮಂದಿಗೆ ಮಾತ್ರ ತಕ್ಷಣ ಭೂ ದಾಖಲೆಗಳು ಅಕ್ರಮವಾಗಿ ಮಂಜೂರಾಗುತ್ತಿದೆ ಎಂದು ನಾಚಪ್ಪ ಆರೋಪಿಸಿದರು.

ಭೂ ರಾಜಕೀಯ ಸ್ಥಿರತೆಗೆ, ಸ್ವಯಂ ಆಡಳಿತ, ಸ್ವಯಂ ನಿರ್ಣಯ ಹಕ್ಕು ಮಾತ್ರ ಪರಿಹಾರ ನೀಡಬಲ್ಲದು ಎಂದು ಅಭಿಪ್ರಾಯಪಟ್ಟ ಅವರು, ಡಾ.ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿಪಾದಿಸುತ್ತಿರುವ ಸಂವಿಧಾನದ 6 ಮತ್ತು 8 ನೇ ಶೆಡ್ಯೂಲ್‍ಗಳ ರಾಜ್ಯಾಂಗ ಖಾತರಿ ಹಾಗೂ ಬುಡಕಟ್ಟು ಕುಲಕ್ಕೆ ಸಂವಿಧಾನದ ಭದ್ರತೆ ದೊರಕುವದು ಅವಶ್ಯವೆಂದರು.

ಭೂ ಅಕ್ರಮ ಮಂಜೂರಾತಿ ಯಿಂದ ಕೊಡಗಿನ ಮೂಲ ಸಂಸ್ಕøತಿಗೆ ದಕ್ಕೆಯಾಗಿದ್ದು, ಪವಿತ್ರ ನೆಲೆಯನ್ನು ಉಳಿಸಿಕೊಳ್ಳುವದಕ್ಕಾಗಿ ಸಿಎನ್‍ಸಿ ಹೋರಾಟವನ್ನು ನಿರಂತರವಾಗಿ ನಡೆಸಲಿದೆ. ಇಲ್ಲಿಯವರೆಗೆ ಕೊಡಗಿನ ಭೂಮಿ ಯನ್ನು ಉಳಿಸಿಕೊಳ್ಳುವದಕ್ಕಾಗಿ ಯಾವದೇ ಸಂಘಟನೆಗಳು ಮುಂದೆ ಬಾರದೆ ಇರುವದು ದುರಂತವೆಂದು ಟೀಕಿಸಿದ ನಾಚಪ್ಪ ಅಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮೂಕೊಂಡ ದಿಲೀಪ್, ಚಂಬಾಂಡ ಜನತ್ ಹಾಗೂ ಪುಲ್ಲೇರ ಕಾಳಪ್ಪ ಉಪಸ್ಥಿತರಿದ್ದರು.