ಮಡಿಕೇರಿ, ಮಾ. 7: ಕರ್ನಾಟಕ ಲೋಕಸೇವಾ ಆಯೋಗವು ಕೆ.ಎಸ್. ಗ್ರೂಪ್ ‘ಎ’ ಮತ್ತು ‘ಬಿ’ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ನಡೆಸಿದ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳೆರಡರಲ್ಲೂ ಕಲ್ಲೇಂಗಡ ಬಬಿನ್ ಬೋಪಣ್ಣ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದು, ಬೆಳಗಾವಿ ಜಿಲ್ಲೆಗೆ ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಸರ್ಕಾರ ನೇಮಿಸಿದೆ. ಬಬಿನ್ ಬೋಪಣ್ಣ ಡೈರಿ ಫಾರಂ ನಿವಾಸಿ ಕಲ್ಲೇಂಗಡ ಬೋಪಣ್ಣ ಮತ್ತು ಕಾಮಿ ಬೋಪಣ್ಣ ದಂಪತಿಯ ಪುತ್ರ.