ಸೋಮವಾರಪೇಟೆ, ಮಾ.7: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಬಿ.ಈ.ರಮೇಶ್‍ಶೆಟ್ಟಿ(45) ಅವರು ಅನಾರೋಗ್ಯದಿಂದ ತಾ. 7ರಂದು ಮಧ್ಯಾಹ್ನ ಮೃತರಾದರು.

ಪ.ಪಂ.ನ ವಾರ್ಡ್ ಸಂಖ್ಯೆ 11ರಿಂದ ಕಳೆದ ಎರಡು ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ರಮೇಶ್ ಅವರು, ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ರಮೇಶ್‍ಶೆಟ್ಟಿ ಅವರು ಅನಾರೋಗ್ಯ ಪೀಡಿತರಾಗುತ್ತಿದ್ದಂತೆ ಖಿನ್ನತೆಗೆ ತುತ್ತಾಗಿ ಕಳೆದ 20 ದಿನಗಳ ಹಿಂದೆ ಪತ್ನಿ ಮೃತಪಟ್ಟಿದ್ದರು. ನಂತರ ಸಕಲೇಶಪುರದ ಸಹೋದರಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ಇಂದು ಮೃತಪಟ್ಟಿದ್ದಾರೆ.

ಸಂತಾಪ: ರಮೇಶ್ ಅವರ ನಿಧನಕ್ಕೆ ತಾ.ಪಂ. ಸದಸ್ಯ ಕೆ.ಎ. ಆದಂ ಸಂತಾಪ ವ್ಯಕ್ತಪಡಿಸಿದ್ದಾರೆ.