ಮಡಿಕೇರಿ, ಮಾ. 6: ಮಡಿಕೇರಿ ನಗರಸಭೆಯಿಂದ ಇಲ್ಲೊಂದು ಕಾಮಗಾರಿ ನಡೆದಿದೆ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಬಲಬದಿ ಆಕಾಶವಾಣಿ ಕೇಂದ್ರಕ್ಕೆ ತೆರಳುವ ರಸ್ತೆಯಲ್ಲಿ ಮಧ್ಯೆ ಚರಂಡಿ ತೋಡಿ ಪೈಪ್ ಅಳವಡಿಸಿ ಅದರ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ.

ಈ ಕಾಮಗಾರಿ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಪೈಪ್ ಮೇಲೆ ಕಾಂಕ್ರೀಟಿಕರಣ ಮಾಡುವ ಭರದಲ್ಲಿ ರಸ್ತೆಯ ಮೇಲ್ಭಾಗ ಸಮಾಧಿಯ ರೀತಿಯಲ್ಲಿ ಕಟ್ಟೆ ಕಟ್ಟಲಾಗಿದ್ದು, ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ಆಯತಪ್ಪಿ ನೆಲಕ್ಕುರುಳುವದು ಖಚಿತ. ಇಲ್ಲಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿರುವ ಘಟನೆಯೂ ಈಗಾಗಲೇ ನಡೆದಿದ್ದು, ಅವೈಜ್ಞಾನಿಕವಾಗಿ ಮಾಡಲಾಗಿರುವ ಈ ಕಾಮಗಾರಿಯಿಂದ ಮುಂದೇನು ಅನಾಹುತ ಕಾದಿದೆಯೋ ಎಂದು ಸವಾರರು ಆತಂಕಕ್ಕೀಡಾಗಿದ್ದಾರೆ.