ಮಡಿಕೇರಿ, ಮಾ. 6: ಪೆರಾಜೆಯ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಗೌಡ ಯುವ ಸೇವಾ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉಪಾಂತ್ಯ ಹಾಗೂ ಅಂತಿಮ ಪಂದ್ಯಾವಳಿ ತಾ. 7 ರಂದು (ಇಂದು) ನಡೆಯಲಿದೆ. ಇದರೊಂದಿಗೆ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಗಳು ಕೂಡ ನಡೆಯಲಿವೆ.ಇಂದು ನಡೆದ ಪಂದ್ಯಾವಳಿ ಯಲ್ಲಿ ಊರುಬೈಲು ತಂಡ 6 ವಿಕೆಟ್‍ಗೆ 57 ರನ್ ಗಳಿಸಿದರೆ, ಅಮೆಮನೆ ತಂಡ 5 ವಿಕೆಟ್ ಕಳೆದು ಕೊಂಡು 55 ರನ್ ಗಳಿಸಿ ಕೇವಲ 2 ರನ್‍ಗಳ ಅಂತರದಿಂದ ಸೋಲನು ಭವಿಸಿತು. ಪಡ್ಡಂಬೈಲು ತಂಡ 6 ವಿಕೆಟ್‍ಗೆ 100 ರನ್ ಗಳಿಸಿದರೆ, ಆತಿಥೇಯ ನಿಡ್ಯಮಲೆ ತಂಡ 9 ವಿಕೆಟ್ ಕಳೆದು ಕೊಂಡು 61 ರನ್ ಮಾತ್ರ ಗಳಿಸಿ
(ಮೊದಲ ಪುಟದಿಂದ) 39 ರನ್‍ಗಳ ಅಂತರದಿಂದ ಸೋಲನುಭವಿಸಿತು.
ಕುಡೆಕಲ್ಲು ತಂಡ 1 ವಿಕೆಟ್‍ಗೆ 164 ರನ್‍ಗಳ ಬೃಹತ್ ಮೊತ್ತ ಪೇರಿಸಿದರೆ ಉತ್ತರವಾಗಿ ಆಡಿದ ತೊತ್ತಿಯನ ತಂಡ 6 ವಿಕೆಟ್‍ಗೆ 24 ರನ್ ಮಾತ್ರ ಗಳಿಸಿ 140 ರನ್‍ಗಳ ಭಾರೀ ಅಂತರ ದಿಂದ ಸೋಲನುಭವಿಸಿತು.
ಕ್ವಾರ್ಟರ್ ಫೈನಲ್‍ನಲ್ಲಿ ಉಳುವಾರು ತಂಡ 7 ವಿಕೆಟ್‍ಗೆ 108 ರನ್ ಗಳಿಸಿದರೆ, ಮುದಿಯಾರು ತಂಡ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 88 ರನ್ ಮಾತ್ರ ಗಳಿಸಿ 20 ರನ್‍ಗಳ ಅಂತರದಿಂದ ಸೋಲನ್ನೊಪ್ಪಿತು. ಮತ್ತೊಂದು ಕ್ವಾರ್ಟರ್ ಫೈನಲ್‍ನಲ್ಲಿ ಮೇಲ್ಚೆಂಬು ತಂಡ 9 ವಿಕೆಟ್‍ಗೆ 81 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಸುಳ್ಯಕೋಡಿ ತಂಡ ಉತ್ತಮ ಪ್ರದರ್ಶನದೊಂದಿಗೆ 87 ರನ್ ಗಳಿಸಿ 6 ವಿಕೆಟ್‍ಗಳ ಜಯ ಸಂಪಾದಿಸಿತು.
ಕುಡೆಕಲ್ಲು ಹಾಗೂ ಊರುಬೈಲು ತಂಡಗಳ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಊರುಬೈಲು ತಂಡ 4 ವಿಕೆಟ್‍ಗೆ 94 ರನ್ ಗಳಿಸಿತು. ಉತ್ತರವಾಗಿ ಆಡಿದ ಕುಡೆಕಲ್ಲು ತಂಡ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 21 ರನ್‍ಗಳ ಅಂತರದಿಂದ ಸೋಲನ್ನಪ್ಪಿ ಪಂದ್ಯಾವಳಿಯಿಂದ ಹೊರಬಿದ್ದಿತು.
ಕಲ್ಲುಮುಟ್ಲು ಹಾಗೂ ಪಡ್ಡಂಬೈಲು ತಂಡಗಳ ಕ್ವಾರ್ಟರ್ ಫೈನಲ್‍ನಲ್ಲಿ ಪಡ್ಡಂಬೈಲು ತಂಡ 4 ವಿಕೆಟ್‍ಗೆ 119 ರನ್ ಗಳಿಸಿದರೆ, ಕಲ್ಲುಮುಟ್ಲು ತಂಡ 3 ವಿಕೆಟ್ ಕಳೆದು ಕೊಂಡು 90 ರನ್ ಮಾತ್ರ ಗಳಿಸಿ 29 ರನ್‍ಗಳ ಅಂತರದಿಂದ ಸೋಲನುಭವಿಸಿ ಪಂದ್ಯಾವಳಿ ಯಿಂದ ಹೊರಬಿದ್ದಿತು.