ಮಡಿಕೇರಿ, ಮಾ.6 : ಹಝ್ರತ್ ಫಕೀರ್ ಷಾ ವಲಿಯುಲ್ಲಾಹಿಯವರ ಇತಿಹಾಸ ಪ್ರತಿದ್ಧ ವಾರ್ಷಿಕ ಉರೂಸ್ ಶನಿವಾರಸಂತೆಯ ಗುಡುಗಳಲೆಯಲ್ಲಿ ತಾ. 8 ರಿಂದ 11ರವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಸುಹೈಬ್ ಫೈಝಿ, ನಾಲ್ಕು ದಿನಗಳ ಕಾಲ ಉರೂಸ್ ಪ್ರಯುಕ್ತ ಪ್ರಖ್ಯಾತ ಉಲಮಾ, ಸಾದಾತುಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ತಾ. 8 ರಂದು ಸಯ್ಯಿದ್ ಕೆ.ಪಿ.ಎಸ್. ಜುಮುಲುಲ್ಲೈಲಿ ತಂಙಳ್ ನೇತೃತ್ವದಲ್ಲಿ ರಾತ್ರಿ 8 ಗಂಟೆಗೆ ಬದ್‍ರಿಯಾ ಜುಮಾ ಮಸೀದಿಯ ಖತೀಬರಾದ ಮುಹಮ್ಮದ್ ಶುಹೈಬ್ ಫೈಝಿ ಅವರು ಸ್ತ್ರೀಯರ ನಮಾಝ್ ಕೊಠಡಿ ಹಾಗೂ ಸ್ವಲಾತ್ ಮಜ್‍ಲಿಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಮಾಅತ್‍ನ ಅಧ್ಯಕ್ಷ ಹಸೈನಾರ್ ಉಸ್ತಾದ್ ಅವರು ವಹಿಸಲಿದ್ದಾರೆ ಎಂದರು.
ತಾ. 9 ರಂದು ರಾತ್ರಿ 8 ಗಂಟೆಗೆ ಇರಿಟ್ಟಿ ಜುಮಾ ಮಸೀದಿಯ ಉಸ್ತಾದ್ ರಿಯಾಸ್ ಹುದವಿ ಧಾರ್ಮಿಕ ಮತಪ್ರವಚನ ನೀಡಲಿದ್ದಾರೆ. ತಾ. 10 ರಂದು ರಾತ್ರಿ 8 ಗಂಟೆಗೆ ಸಯ್ಯಿದ್ ಶರ್ಫುದ್ದೀನ್ ತಂಙಳ್ ಅಲ್‍ಹಾದಿ ರಬ್ಬಾನಿ ಅವರ ನೇತೃತ್ವದಲ್ಲಿ ಖತ್‍ಮುಲ್ ಖುರ್‍ಆನ್ ದುಆ ನಡೆಯಲಿದೆ.
ತಾ.11 ರಂದು ಉರೂಸ್‍ನ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉರೂಸ್ ನೇರ್ಚೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಬೆಳಿಗ್ಗೆ 11.30ಕ್ಕೆ ಮೌಲಿದ್ ಪಾರಾಯಣ ನಡೆಯಲಿದ್ದು, ಮಧ್ಯಾಹ್ನ 12.30 ರಿಂದ ಸಂಜೆ 3 ಗಂಟೆಗೆಯವರೆಗೆ ಅನ್ನಾದಾನ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಸೈನಾರ್ ಉಸ್ತಾದ್, ಉಪಾಧ್ಯಕ್ಷ ಸಿ.ಎಂ. ಅಬ್ದುಲ್ಲಾ, ಸದಸ್ಯರುಗಳಾದ ಶೇಖಬ್ಬಾಜಿ, ಹಂಝ ಮತ್ತು ಅಧ್ಯಾಪಕ ಶಮೀರ್ ಫೈಝಿ ಉಪಸ್ಥಿತರಿದ್ದರು.