ಕುಶಾಲನಗರ, ಮಾ. 6: ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದ ಸಂದರ್ಭ ಲಾಡ್ಜ್ ಮಾಲೀಕನೊಬ್ಬ ಕಲ್ಲು ಎತ್ತಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ದೂರು ದಾಖಲಿಸಿದ್ದಾರೆ.

ಶನಿವಾರ ಬೆಳಗ್ಗಿನ ಜಾವ ಮಡಿಕೇರಿ ರಸ್ತೆ ಬದಿಯಲ್ಲಿರುವ ತೋಯಿಬಾ ವಸತಿಗೃಹದ ಅಕ್ರಮ ಆವರಣ ಗೋಡೆ ತೆರವು ಕಾರ್ಯಾಚರಣೆ ಸಂದರ್ಭ ಕಟ್ಟಡದ ಮಾಲೀಕ ಮಹಮ್ಮದ್ ಎಂಬಾತ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮತ್ತಿತರ ಸಿಬ್ಬಂದಿಗಳ ಮೇಲೆ ಕಲ್ಲು ಎತ್ತಿಹಾಕಿ ಕರ್ತವ್ಯಕ್ಕೆ ಅಡ್ಡಿ ಮಾಡಿರುವ ಬಗ್ಗೆ ದಾಖಲೆ ಸಹಿತ ದೂರಿನಲ್ಲಿ ತಿಳಿಸಲಾಗಿದ್ದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ.