ಮಡಿಕೇರಿ, ಮಾ. 5: ಕುಶಾಲನಗರದ ಬೈಚನಹಳ್ಳಿ ಬಳಿ ಹೆದ್ದಾರಿಯಲ್ಲಿ ಟಾಟಾಏಸ್ ವಾಹನವೊಂದು (ಕೆಎ 12 ಬಿ 3518) ಎದುರಿನಿಂದ ಬರುತ್ತಿದ್ದ ಪಲ್ಸರ್ ಬೈಕ್ ನಡುವೆ (ಕೆಎ 12 ಕ್ಯೂ 8730) ಡಿಕ್ಕಿ ಸಂಭವಿಸಿದೆ. ಪರಿಣಾಮ ಕೂಡಿಗೆ ಬಳಿಯ ಸೀಗೆಹೊಸೂರು ನಿವಾಸಿಗಳಾದ ಹರೀಶ್, ರಾಜೇಶ್ ಎಂಬವರಿಗೆ ತೀವ್ರ ಪೆಟ್ಟಾಗಿ ಕಾಲು ಮೂಳೆ ಮುರಿದಿದೆ. ಈ ಇಬ್ಬರು ಸವಾರರಿಗೆ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಟಾಟಾಏಸ್ ವಾಹನ ಚಾಲಕನ ವಿರುದ್ಧ ಕುಶಾಲನಗರ ಸಂಚಾರಿ ಠಾಣಾ ಪೊಲೀಸರು ಪ್ರಕರಣದೊಂದಿಗೆ ಮುಂದಿನ ಕ್ರಮಕೈಗೊಂಡಿದ್ದಾರೆ.