ಮಡಿಕೇರಿ, ಮಾ. 5: ಕುಂಜಿಲ ಗ್ರಾಮದ ನಿವಾಸಿ ರಜಾಕ್ ಎಂಬವರು ನಿನ್ನೆ ಪಯ್ಯನೇರಿ ಮಸೀದಿಯಲ್ಲಿ ಕಾರ್ಯಕ್ರಮ ನಿಮಿತ್ತ ತೆರಳಿ, ಹಿಂತಿರುಗಿ ಬಂದು ನೋಡಲಾಗಿ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿರುವ ಯಾರೋ ಕಳ್ಳರು ರೂ. 50 ಸಾವಿರ ನಗದು ಹಣವನ್ನು ದೋಚಿರುವದಾಗಿ ತಿಳಿದು ಬಂದಿದೆ. ಈ ಬಗ್ಗೆ ಮನೆ ಮಾಲೀಕರು ನೀಡಿದ ಪುಕಾರು ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.