ನಾಪೋಕ್ಲು, ಮಾ. 5: ಸಮೀಪದ ಪಾಲೂರು-ಕ್ಯಾಮಾಟ್ ಬಕ್ಕ ಸಂಪರ್ಕ ರಸ್ತೆಯು ಸಂಪೂರ್ಣ ಹಾಳಾಗಿದ್ದು ರಸ್ತೆ ದುರಸ್ತಿಯನ್ನು ಕೈಗೊಳ್ಳದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕೇಮಾಟ್ - ಬಕ್ಕ ಸಂಪರ್ಕ ರಸ್ತೆಯು ಅಂದಾಜು 3.5 ಕಿ.ಮೀ. ಅಂತರವಿದ್ದು ನಾಪೋಕ್ಲು - ಮಡಿಕೇರಿ ಮುಖ್ಯ ರಸ್ತೆಯಿಂದ ಭಾಗಮಂಡಲ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದೆ. ಈ ರಸ್ತೆಯ ಮೂಲಕ ಸಾಗಿದರೆ ಸಂಚಾರಕ್ಕೆ ಅಂತರ ಕಡಿಮೆಯಾಗುತ್ತಿತ್ತು. ಆದರೆ ಇದೀಗ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಸಂಚಾರ ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತು ವರ್ಷಗಳ ಹಿಂದೆ ರಸ್ತೆ ದುರಸ್ತಿ ಪಡಿಸಿದ್ದು ಬಿಟ್ಟರೆ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಸುತ್ತಮುತ್ತ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿವೆ. ತಕ್ಷಣ ರಸ್ತೆ ದುರಸ್ತಿ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗಬೇಕು ಎಂದು ಗ್ರಾಮಪಂಚಾಯಿತಿ ಸದಸ್ಯರಾದ ಚೆರುವಾಳಂಡ ನಿರನ್ ನಂಜಪ್ಪ, ಬಿ.ಎ.ರಾಮಣ್ಣ, ಬೈತಡ್ಕ ಮಮತ, ಒತ್ತಾಯಿಸಿದ್ದಾರೆ. ಈಚೆಗೆ ಬೆಟ್ಟಗೇರಿ ಗ್ರಾಮಪಂಚಾಯಿತಿ ಸಭೆಯಲ್ಲಿ ರಸ್ತೆ ದುರಸ್ತಿಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದ್ದು ಸದಸ್ಯರೆಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ ಹದಿನೈದು ದಿನಗಳಲ್ಲಿ ರಸ್ತೆ ದುರಸ್ತಿಗೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಅವರು ಎಚ್ಚರಿಸಿದ್ದಾರೆ.

-ಚಿತ್ರ ವರದಿ: ದುಗ್ಗಳ ಸದಾನಂದ