ಮೂರ್ನಾಡು, ಮಾ. 5 : ವೀರಾಜಪೇಟೆ-ಮೂರ್ನಾಡು ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯವನ್ನು ನಿರ್ವಹಿಸ ಬೇಕಿರುವದರಿಂದ ತಾ. 6 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೂರ್ನಾಡು ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸ ಲಾಗುವದು.

ಮೂರ್ನಾಡು, ನಾಪೋಕ್ಲು, ಬಲ್ಲಮಾವಟಿ, ಅರೆಕಾಡು ಸುತ್ತ ಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೂರ್ನಾಡು ಸೆಸ್ಕ್ ಶಾಖಾಧಿಕಾರಿ ಚೇತನ್ ತಿಳಿಸಿದ್ದಾರೆ.