ಮಡಿಕೇರಿ, ಮಾ. 5: ಪೆರಾಜೆಯ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯ ಯುವ ಸೇವಾ ಸಂಘದ ಆಶ್ರಯದಲ್ಲಿ ಗೌಡ ಜನಾಂಗದ ನಡುವೆ ನಡೆಯುತ್ತಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಡೆಕಲ್ಲು ಹಾಗೂ ತೊತ್ತಿಯನ ಕುಟುಂಬ ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯದಲ್ಲಿ ಕುರುಂಜಿ ತಂಡ 7 ವಿಕೆಟ್‍ಗೆ 97 ರನ್ ಗಳಿಸಿದರೆ, ಕೂಡಕಂಡಿ ತಂಡ 5 ವಿಕೆಟ್‍ಗೆ 76 ರನ್ ಮಾತ್ರ ಗಳಿಸಿ 21 ರನ್‍ಗಳ ಅಂತರದಿಂದ ಸೋಲನುಭವಿಸಿತು.

ಮೇತಡ್ಕ ತಂಡ 5 ವಿಕೆಟ್‍ಗೆ 143 ರನ್ ಗಳಿಸಿದರೆ, ವಾಡ್ಯಪ್ಪನ ತಂಡ 7 ವಿಕೆಟ್‍ಗೆ 92 ರನ್ ಮಾತ್ರ ಗಳಿಸಿ 51 ರನ್‍ಗಳ ಅಂತರದಿಂದ ಸೋಲನ್ನಪ್ಪಿತು. ಕುಡೆಕಲ್ಲು ತಂಡ 1 ವಿಕೆಟ್ ನಷ್ಟದಲ್ಲಿ 131 ರನ್ ಪೇರಿಸಿದರೆ, ಉತ್ತರವಾಗಿ ಆಡಿದ ಅಂಬೆಕಲ್ಲು ತಂಡ 3 ವಿಕೆಟ್‍ಗೆ 68 ರನ್ ಮಾತ್ರ ಗಳಿಸಿ 63 ರನ್‍ಗಳ ಭಾರೀ ಅಂತರದಿಂದ ಸೋಲನುಭವಿಸಿತು. ಕೋಲ್ಚಾರು ತಂಡ 7 ವಿಕೆಟ್‍ಗೆ 124 ರನ್ ಗಳಿಸಿದರೆ, ಬೊಳ್ಳೂರು ತಂಡ 6 ವಿಕೆಟ್‍ಗೆ 64 ರನ್ ಗಳಿಸಿ 59 ರನ್‍ಗಳ ಅಂತರದಿಂದ ಸೋಲನ್ನಪ್ಪಿತು.

ಮೇತಡ್ಕ ಹಾಗೂ ಕುಡೆಕಲ್ಲು ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಮೇತಡ್ಕ ತಂಡ 6 ವಿಕೆಟ್‍ಗೆ 46 ರನ್ ಗಳಿಸಿದರೆ, ಕುಡೆಕಲ್ಲು ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು.

ಕೋಲ್ಚಾರು ಹಾಗೂ ತೊತ್ತಿಯನ ತಂಡಗಳ ನಡುವಿನ ಪಂದ್ಯದಲ್ಲಿ ತೊತ್ತಿಯನ ತಂಡ 2 ವಿಕೆಟ್‍ಗೆ 145 ರನ್ ಗಳಿಸಿದರೆ, ಕೋಲ್ಚಾರು ತಂಡ 8 ವಿಕೆಟ್‍ಗೆ 73 ರನ್ ಗಳಿಸಿ 72 ರನ್‍ಗಳ ಭಾರೀ ಅಂತರದಿಂದ ಸೋಲನ್ನಪ್ಪಿತು. ಕುರುಂಜಿ ಹಾಗೂ ಕುಡೆಕಲ್ಲು ತಂಡಗಳ ನಡುವಿನ ಇನ್ನೊಂದು ಪಂದ್ಯದಲ್ಲಿ ಕುಡೆಕಲ್ಲು ತಂಡ 8 ವಿಕೆಟ್‍ಗೆ 66 ರನ್ ಗಳಿಸಿದರೆ, ಕುರುಂಜಿ ತಂಡ 8 ವಿಕೆಟ್‍ಗೆ 50 ರನ್ ಗಳಿಸಿ 16 ರನ್‍ಗಳ ಅಂತರದಿಂದ ಸೋಲನುಭವಿಸಿತು.