ಮಡಿಕೇರಿ, ಮಾ.2: ಮಡಿಕೇರಿ ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮನೆಗಳನ್ನು ನಿರ್ಮಿಸಲು, ರಾಜ್ಯ ಸರಕಾರ ಪೌರಾಡಳಿತ ಸಚಿವಾಲಯದಿಂದ ರೂಪಿಸಿರುವ ಭೂ ಪರಿವರ್ತನೆ ನಿಯಮ ವಿರೋಧಿಸಿ ಜೆಡಿಎಸ್‍ನಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಬಿ.ಎ. ಜೀವಿಜಯ, ಪಕ್ಷದ ಜಿಲ್ಲಾ ಅಧ್ಯಕ್ಷ ಸಂಕೇತ್ ಪೂವಯ್ಯ ನೇತೃತ್ವ ವಹಿಸಿದ್ದರು.ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರವು ಕೃಷಿಭೂಮಿ ಹಾಗೂ ಮನೆಗಳ ನಿವೇಶನಗಳನ್ನು ಪರಿವರ್ತಿಸಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಸರಕಾರ ಹೊರಡಿಸಿರುವ ಸುತ್ತೋಲೆ ಆದೇಶ ಹಿಂಪಡೆಯಬೇಕೆಂದು ಪ್ರತಿಭಟನೆ ವೇಳೆ ಒತ್ತಾಯಿಸಲಾಯಿತು.

ಈ ಸುತ್ತೋಲೆಯಿಂದಾಗಿ ಕಳೆದ ನಾಲ್ಕೈದು ದಶಕಗಳಿಂದ ಮಡಿಕೇರಿಯಲ್ಲಿ ವಾಸಿಸುವವರಿಗೂ ಸಮಸ್ಯೆ ಎದುರಾಗಿದ್ದು, ನಗರಸಭೆಯಿಂದ ಫಾರಂ -3 ಅಡಿಯಲ್ಲಿ ಅನುಸರಿಸುವ ನೀತಿಯನ್ನು ಮುಂದುವರಿಸಲು ಮತ್ತು ಪುನಃ ಸರಕಾರದಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲವೆಂದು ಗಮನ ಸೆಳೆಯಲಾಯಿತು.