ಸೋಮವಾರಪೇಟೆ, ಮಾ. 2: ಮಹಿಳೆಯೋರ್ವರ ಮೇಲೆ ಆಕೆಯ ಪತಿ ಬೆಂಕಿಕೊಳ್ಳಿಯಿಂದ ಹಲ್ಲೆ ನಡೆಸಿರುವ ಘಟನೆ ಸಮೀಪದ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದ್ದು, ಆರೋಪಿ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿಬ್ಬೆಟ್ಟ ಗ್ರಾಮದ ಶೇಖರ ಎಂಬಾತ ಮದ್ಯಪಾನ ಮಾಡಿ ಮನೆಯಲ್ಲಿದ್ದ ತನ್ನ ಪತ್ನಿ ಜಿ.ಕೆ. ಗಂಗೆ ಅವರ ಮುಂಗೈ, ತಲೆ, ಮುಖ, ತೊಡೆ ಭಾಗಕ್ಕೆ ಬೆಂಕಿಯ ಕೊಳ್ಳಿಯಿಂದ ಹಲ್ಲೆ ನಡೆಸಿದ್ದು, ಗಂಗೆ ಅವರಿಗೆ ಸುಟ್ಟ ಗಾಯಗಳಾಗಿವೆ. ಸೋಮವಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆರೋಪಿಯ ವಿರುದ್ಧ ದೂರು ದಾಖಲಾಗಿದೆ.