ಸುಂಟಿಕೊಪ್ಪ, ಮಾ. 2: ಕೊಡಗು ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಜೋಸೆಫ್ ಶ್ಯಾಂ, ಪ್ರಧಾನ ಕಾರ್ಯದರ್ಶಿಯಾಗಿ ಮಡಿಕೇರಿಯ ಜಾನ್ಸನ್ ಪಿಂಟೋ ಅವರುಗಳನ್ನು ಅವಿರೋಧವಾಗಿ ನೇಮಕಗೊಳಿಸಲಾಯಿತು. ಕುಶಾಲನಗರದ ಮಿಸ್ಟ್‍ಪ್ಲವರ್ ಸಭಾಂಗಣದಲ್ಲಿ ಜಯರಾಜ್ ಅಧ್ಯಕ್ಷತೆಯಲ್ಲಿ ನಡೆದ ರೋಮನ್ ಕ್ಯಾಥೋಲಿಕ್‍ನ ಸಂಘದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷರುಗಳಾಗಿ ವಿನ್ಸಿ ಡಿಸೋಜ ಸೋಮವಾರಪೇಟೆ, ಸಿದ್ದಾಪುರದ ಪಿ.ವಿ. ಜಾನ್ಸ್‍ನ್, ಸುಂಟಿಕೊಪ್ಪ ರೋಸ್‍ಮೆರಿ ರಾಡ್ರಿಗಸ್, ಕೂಡು ಮಂಗಳೂರಿನ ಫಿಲೋಮಿನ ಜಾರ್ಜ್, ಕೆ.ಜೆ. ಪೀಟರ್ ಮಡಿಕೇರಿ, ಸಹ ಕಾರ್ಯದರ್ಶಿಯಾಗಿ ಪಿಲಿಫ್‍ವಾಸ್, ದಾಸ್, ಖಜಾಂಚಿಯಾಗಿ ಐ.ಡಿ. ರಾಯ್, ಸಂಚಾಲಕರಾಗಿ ಜೋಕಿಂ ರಾಡ್ರಿಗಸ್, ಮಾಧ್ಯಮ ಸಲಹೆಗಾರರಾಗಿ ಎಂ.ಬಿ. ವಿನ್ಸೆಂಟ್ ವಿನೋದ್ ಸುಂಟಿಕೊಪ್ಪ, ಸಂಘಟನಾ ಕಾರ್ಯದಶಿಯಾಗಿ ನೆಲ್ಲಿಹುದಿಕೇರಿ ಸಜಿ, ಪೀಟರ್ ಕೂಡಿಗೆ, ಚೆಟ್ಟಳ್ಳಿ ಡೆನ್ನಿ ಬೋರಾಸ್, ಪಿ.ಎಫ್. ಸಬಾಸ್ಟಿನ್ ಸುಂಟಿಕೊಪ್ಪ, ಕ್ರೀಡಾ ಕಾರ್ಯದರ್ಶಿಯಾಗಿ ಅಂತೋಣಿ ಡಿಸೋಜ, ಮತ್ತು ಮರ್ವಿನ್ ಲೋಬೋ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಶಾರದ, ಬ್ಲೇಸಿಕ್ರಾಸ್ತಾ, ಗೌರವ ಸಲಹೆಗಾರರಾಗಿ ಆಗಸ್ಟಿನ್ ಜಯರಾಜ್, ಜರ್ಮಿ ಡಿಸೋಜ, ಕ್ರೇಸ್‍ವೆಲ್ ಕೋಟ್ಸ್, ಎಸ್.ಎಂ. ಡಿಸಿಲ್ವಾ, ಎನ್.ಟಿ. ಜೋಸೆಫ್, ಡೋಮಿ ರೊಜಾರಿಯೋ, ಗೋಪಾಲಪುರದ ಫ್ರಾನ್ಸಿಸ್ ಹಾಗೂ ಧಾರ್ಮಿಕ ಪ್ರವರ್ತಕರಾಗಿ ಅಂತೋಣಿ ಪ್ರಭುರಾಜ್ ಕುಶಾಲನಗರ ಇವರುಗಳನ್ನು ನೇಮಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್ ಉಪಸ್ಥಿತರಿದ್ದರು.