ವೀರಾಜಪೇಟೆ, ಮಾ. 3: ವೀರಾಜಪೇಟೆ ಬಳಿಯ ನಲ್ವತ್ತೊಕ್ಕಲು ಗ್ರಾಮದ ನೆಲ್ಲಚಂಡ ಸುನಿಲ್ ಪೂಣಚ್ಚ ಎಂಬವರಿಗೆ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ಮಾಡಿದ ಆರೋಪದ ಮೇರೆ ಅದೇ ಗ್ರಾಮದ ಎನ್.ಎ.ಸುಬ್ರಮಣಿ ಎಂಬಾತನಿಗೆ ಎರಡು ವರ್ಷ ಸಜೆ ಹಾಗೂ ರೂ. 3000 ದಂಡ ವಿಧಿಸಿ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಅವರು ತೀರ್ಪು ನೀಡಿದ್ದಾರೆ.
ಕಳೆದ ತಾ.16.12.2016ರಂದು ಸುನಿಲ್ ಪೂಣಚ್ಚ ನಲ್ವತ್ತೊಕ್ಕಲು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕೋಲ್ ಮಂದ್ ವೀಕ್ಷಿಸಲು ಮೈದಾನದ ಒಂದು ಬದಿಯಲ್ಲಿ ನಿಂತಿದ್ದಾಗ ಹಿಂದಿನ ವೈಷಮ್ಯವನ್ನು ಸಾಧಿಸಲು ಅಲ್ಲಿಗೆ ಬಂದ ಸುಬ್ರಮಣಿ ಕೈಯ್ಯಲ್ಲಿದ್ದ ಕತ್ತಿಯಿಂದ ಎಡ ಹೊಟ್ಟೆಯ ಬದಿಗೆ ಹಾಗೂ ಎರಡು ಪಕ್ಕೆಲುಬುಗಳಿಗೆ ಕಡಿದು ಗಂಭೀರ ಸ್ವರೂಪದ ಗಾಯಗೊಳಿಸಿರುವ ಆರೋಪದ ಮೇರೆ ಇಲ್ಲಿನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಸುಬ್ರಮಣಿಯನ್ನು ಬಂಧಿಸಿದ್ದರು.
ಸರಕಾರದ ಪರ ಅಭಿಯೋಜಕ ಡಿ.ನಾರಾಯಣ್ ವಾದಿಸಿದರು.