ವೀರಾಜಪೇಟೆ, ಮಾ. 2: ಭಾರತೀಯ ಜನತಾ ಪಕ್ಷದ ಸಂಘಟನೆಗಾಗಿ ಆರ್ಜಿ ಪಂಚಾಯಿತಿಯ ಪೆರುಂಬಾಡಿ ಯುವಕರ ಸಂಘವು ಪ್ರಧಾನಮಂತ್ರಿಗಳ ಜನಪರ ಯೋಜನೆಗಳಿಂದ ಪ್ರಭಾವಿತರಾಗಿ ನಮೋ ಗ್ರೂಪ್ ಉದಯಗೊಂಡಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ನಮೋ ಗ್ರೂಪ್ ಅಧ್ಯಕ್ಷರಾಗಿ ಕೆ.ಕೆ. ಅನಿಲ್ ಕುಮಾರ್ ಮತ್ತು ಕಾರ್ಯದÀರ್ಶಿಯಾಗಿ ಟಿ.ಆರ್. ಗಣೇಶ್ ಆಯ್ಕೆಗೊಂಡಿದ್ದಾರೆ. ಹದಿಮೂರು ಮಂದಿ ಸಂಘಟನೆಯ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.