ಮಡಿಕೇರಿ. ಮಾ. 3 : ತಾಲೂಕು ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ತಾ. 5 ರಂದು (ನಾಳೆ) ಬೆಳಿಗ್ಗೆ 11 ಗಂಟೆಗೆ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಮಹಿಳಾ ಆಟೋಟ ಸ್ಪರ್ಧೆಯನ್ನು ಪಿ.ಯು.ಸಿ. ಪರೀಕ್ಷೆ ಹಿನ್ನೆಲೆ ತಾಳತ್ತಮನೆ ಆಟದ ಮೈದಾನದಲ್ಲಿ ನಡೆಸಲಾಗುವದು.
ಭಾಗವಹಿಸಲು ಇಚ್ಚಿಸುವವರು ಬೆಳಿಗ್ಗೆ 10 ಗಂಟೆಗೆ ನೋಂದಣಿ ಮಾಡಿಕೊಳ್ಳುವದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: (08272-228197) ಯನ್ನು ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ತಿಳಿಸಿದ್ದಾರೆ.