ಕೂಡಿಗೆ, ಮಾ. 3: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ದೊಡ್ಡಮ್ಮತಾಯಿ ದೇವಾಲಯ ಸಮಿತಿ ವತಿಯಿಂದ ಅಪಘಾತಕ್ಕೀಡಾಗಿ ಕಾಲುಗಳಿಗೆ ತೀವ್ರ ಪೆಟ್ಟಾಗಿರುವ ಗ್ರಾಮದ ಸೂರಪ್ಪ ಮತ್ತು ಮಾನಸ ಕುಟುಂಬಕ್ಕೆ ಚಿಕಿತ್ಸೆಗೆ ಸಹಾಯ ಧನವನ್ನು ವಿತರಿಸಲಾಯಿತು. ಗ್ರಾಮದ ನಿವಾಸಿಗಳಾದ ಸೂರಪ್ಪ ಅವರ ಕುಟುಂಬಕ್ಕೆ ರೂ. 5000 ಮತ್ತು ಮಾನಸ ಅವರ ಕುಟುಂಬಕ್ಕೆ ರೂ. 2500 ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಧನಂಜಯ್, ಕಾರ್ಯದರ್ಶಿ ನಾಗೇಶ್, ನಿರ್ದೇಶಕರಾದ ಸತೀಶ್, ನಾಗೇಂದ್ರ, ಚಿಣ್ಣಪ್ಪ ಮೊದಲಾದವರು ಇದ್ದರು.