ಮಡಿಕೇರಿ, ಮಾ. 2: ಅಖಿಲ ಭಾರತೀಯ ವಿದ್ಯಾರ್ಥಿ ಮಡಿಕೇರಿ ಶಾಖೆ ವತಿಯಿಂದ ತಾ. 3 ರಂದು (ಇಂದು) ‘ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸಾಮರಸ್ಯ ಮತ್ತು ರಾಷ್ಟ್ರೀಯತೆ’ ಕುರಿತು ವಿಚಾರ ಸಂಕಿರಣವನ್ನು ವಿದ್ಯಾರ್ಥಿಗಳಿಗೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿರುವ ಸಮುದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಯೋಧ ಮೇಜರ್ ಬಿ.ಎ. ನಂಜಪ್ಪ ಉದ್ಘಾಟನೆ ಮಾಡಲಿದ್ದು, ರಾಜ್ಯ ಸಹ ಕಾರ್ಯದರ್ಶಿ ವಿದ್ಯಾ ಪಿ.ಎಂ. ಉಪಸ್ಥಿತರಿರುವರು.