ವೀರಾಜಪೇಟೆ, ಫೆ. 28: ತಂತ್ರಜ್ಞಾನಗಳ ಬೆಳವಣಿಗೆಗೆ ಅನುಸಾರವಾಗಿ ಖಾಸಗಿತನವನ್ನು ಸಂರಕ್ಷಿಸುವದು ಬಹುಮುಖ್ಯ ಎಂದು ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಎಂ.ಎನ್. ರವಿಶಂಕರ್ ಹೇಳಿದ್ದಾರೆ. ವೀರಾಜಪೇಟೆ ಸೈಂಟ್‍ಆನ್ಸ್ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ‘ನೆಟ್‍ವರ್ಕ್ ಸೆಕ್ಯೂರಿಟಿ’ ಎಂಬ ವಿಷಯದಲ್ಲಿ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿಯ ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ವಿಶ್ವನಾಥ್ ಪೈ, ಮಂಗಳೂರಿನ ಂIಒIಖಿಯ ಅಧ್ಯಕ್ಷ ಪ್ರೊ. ಸಂತೋಷ್ ರೆಬೆಲ್ಲೋ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ವಿಚಾರ ಸಂಕಿರಣದ ಸಂಚಾಲಕಿ ಸೌಮ್ಯಾ ಸೋಮರಾಜ್ ವೇದಿಕೆಯಲ್ಲಿದ್ದರು. ಪಿ.ಬಿ. ಮುತ್ತಮ್ಮ ಸ್ವಾಗತಿಸಿ, ಚರಿಷ್ಮಾ ಕಾರ್ಯಕ್ರಮಗಳ ನಿರೂಪಿಸಿದರು.