ಮಡಿಕೇರಿ, ಫೆ. 28: ಐದು ವರ್ಷದಿಂದ ಹದಿನೆಂಟು ವರುಷದವರೆಗಿನ ಬಾಲಕಿಯರ ಬಾಲಮಂದಿರದ ಬಾಲಕಿಯರು ಇತ್ತೀಚೆಗೆ ‘ಪುಣ್ಯಕೋಟಿ’ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಬಾಲಭವನ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಕೆ.ವಿ. ಸುಬ್ಬಣ್ಣ ರಂಗ ಸಮೂಹದ ಆಶ್ರಯದಲ್ಲಿ ಪ್ರಸನ್ನ ಅವರು ಸುಂದರವಾಗಿ ನಿರ್ದೇಶಿಸಿದ ನಾಟಕದಲ್ಲಿ ಬದುಕಿನ ಮೌಲ್ಯಗಳು, ಮಾನವೀಯ ಮೌಲ್ಯಗಳು, ಮಾತಿನ ಬೆಲೆ-ನಟನೆ ಎಲ್ಲರ ಮನ ಸೆಳೆಯಿತು. ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಸ್ವಾಗತಿಸಿದರು. ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಗಾಯತ್ರಿ, ನಯನಾ ಕಶ್ಯಪ್, ಸವಿತಾ ಭಟ್ ಮಕ್ಕಳ ಮುಖಕ್ಕೆ ಬಣ್ಣ ಹಚ್ಚಿ ಉದ್ಘಾಟಿಸಿದರು.