ಮಡಿಕೇರಿ, ಮಾ. 1: ಜಿಲ್ಲಾ ಕೇಂದ್ರ ಗ್ರಂಥಾಲಯ ನಗರದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾ ಗ್ರಂಥಾಲಯಗಳಲ್ಲಿ ತಾ. 2 ರಿಂದ 11 ರವರೆಗೆ ಪುಸ್ತಕಗಳ ದಾಸ್ತಾನು ಪರಿಶೀಲಿಸಲಾಗುವದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ತಿಳಿಸಿದ್ದಾರೆ.

ಪುಸ್ತಕ ದಾಸ್ತಾನು ಸಮಯದಲ್ಲಿ ಶಾಖಾ ಗ್ರಂಥಾಲಯಗಳು ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಓದುಗರಿಗೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಓದುಗರು ಸಹಕರಿಸುವಂತೆ ಜಿಲ್ಲಾ ಗ್ರಂಥಪಾಲಕರು ಕೋರಿದ್ದಾರೆ.