ಕೂಡಿಗೆ, ಫೆ. 28: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕತ್ತೂರು ಶ್ರೀ ಉದ್ಭವ ಗೌರಿಶಂಕರ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಕಲಶ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಿಗ್ಗೆ ಹಾರಂಗಿ ನದಿಯಿಂದ ಕಳಸವನ್ನು ಪೂಜಿಸಿ ಮೆರವಣಿಗೆಯೊಂದಿಗೆ ದೇವಾಲಯ ಆವರಣವನ್ನು ತಲುಪಿ ನಂತರ ಕಲಶ ಪ್ರತಿಷ್ಠಾಪನೆಯ ಅಂಗವಾಗಿ ಬೆಳಿಗ್ಗೆ 8.48 ರಿಂದ ಕುಂಭಾಭಿಷೇಕ, ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ರುದ್ರಾಶಾಂತಿ ಹೋಮ, ಕಣಿವೆ ರಾಮಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರಾಚಾರ್ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ದೇವಾಲಯ ಸೇವಾ ಸಮಿತಿ ಟ್ರಸ್ಟ್‍ನ ಅಧ್ಯಕ್ಷ ಕೆ.ಕೆ. ಭೋಗಪ್ಪ, ಕಾರ್ಯದರ್ಶಿ ರವಿ ಸೇರಿದಂತೆ ಸಮಿತಿಯ ನಿರ್ದೇಶಕರು ಇದ್ದರು.