ಚೆಟ್ಟಳ್ಳಿ, ಫೆ. 28: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ (ಪೊವ್ವೋದಿ) ವಾರ್ಷಿಕ ಉತ್ಸವ ತಾ. 2 ರಿಂದ 4 ರವರೆಗೆ ನಡೆಯಲಿದೆ ಎಂದು ತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ಹಾಗೂ ಮುಖ್ಯಸ್ಥ ಚೇರಳತಮ್ಮಂಡ ಆನಂದ ತಿಳಿಸಿದ್ದಾರೆ. ದೇವರ ಬೊಳಕ್ಮರವನ್ನಿಟ್ಟು ಹಬ್ಬದ ಕಟ್ಟು ಪ್ರಾರಂಭವಾಗಿದ್ದು, ತಾ. 2 ರಂದು ಮಧ್ಯಾಹ್ನ 3ಕ್ಕೆ ಪಟ್ಟಣಿ ಹಬ್ಬ, ತಾ. 3 ರಂದು ಪೂವಾಹ್ನ 10.30ಕ್ಕೆ ಅಯ್ಯಪ್ಪ ಬನ, ತಾ. 4 ರಂದು ಮಧ್ಯಾಹ್ನ 3ಕ್ಕೆ ದೊಡ್ಡ ಹಬ್ಬ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರುಗಳು ತಿಳಿಸಿದ್ದಾರೆ.