ಸುಂಟಿಕೊಪ್ಪ, ಫೆ. 28: ಗ್ರಾಮೀಣ ಪ್ರದೇಶದಲ್ಲಿ ದೇಶೀಯ ಕ್ರೀಡೆಗಳಾದ ಕಬಡ್ಡಿ ಹಾಗೂ ಹಗ್ಗಜಗ್ಗಾಟದಂತಹ ಕ್ರೀಡೆಗಳನ್ನು ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ನಡೆಸಿ ಯಶಸ್ವಿಯಾಗಿರುವದು ಶ್ಲಾಘನೀಯ ಎಂದು ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಹೇಳಿದರು.
ನಾಕೂರು-ಕಾನ್ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ 18ನೇ ವರ್ಷದ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಕ್ರೀಡಾಕೂಟದಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಿಲಿದ್ದು, ಮಕ್ಕಳ ಸಾಂಸ್ಕøತಿಕ ಅಭಿರುಚಿ ವೃದ್ಧಿಯಾಗಲಿದೆ ಎಂದರು.
ಮುಖ್ಯ ಅತಿಥಿ ಬೆಳೆಗಾರ ಟಿ.ಕೆ. ಸಾಯಿಕುಮಾರ್ ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸ ಲಾಗಿದೆ. ಫ್ರೆಂಡ್ಸ್ ಯೂತ್ ಕ್ಲಬ್ ಸದಸ್ಯರುಗಳು ಈ ವಿಭಾಗದ ಜನರ ಮನಗೆದ್ದಿದ್ದಾರೆ ಎಂದು ಹೇಳಿದರು.
ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜನಿ ಮಾತನಾಡಿ, ಪೋಷಕರು ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು.
ಇದರಿಂದ ಮಕ್ಕಳ ಆರೋಗ್ಯ ಶಾರೀರಿಕ ದೃಢತೆ ಕಾಪಾಡಿ ಕೊಳ್ಳಬಹುದು ಎಂದರು. ಇತ್ತೀಚೆಗೆ ಟಿ.ವಿ., ಮೊಬೈಲ್ನಿಂದ ಯುವಕರು ಕ್ರೀಡೆಯತ್ತ ಮುಖ ಮಾಡದೆ ಇರುವದು ಕಾಣಬಹುದು. ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳಬೇಕೆಂದರು.
ತಾ.ಪಂ. ಸದಸ್ಯೆ ಹೆಚ್.ಡಿ. ಮಣಿ ಮಾತನಾಡಿ, ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಫ್ರೆಂಡ್ಸ್ ಯೂತ್ ಕ್ಲಬ್ನ್ನು ಉಳಿಸಿ ಬೆಳೆಸಲು ಗ್ರಾಮಸ್ಥರು ಕೈಜೋಡಿಸಬೇಕೆಂದರು.
ಕ್ಲಬ್ ಸ್ಥಾಪಕ ಅಧ್ಯಕ್ಷ ವಸಂತ ಕುಮಾರ್ ಸಮಾಜ ಸೇವೆಗೆ ಬೆನ್ನಲುಬಾಗಿ ನಿಂತಿರುವ ನೀಲಮ್ಮ ಪೆಮ್ಮಯ್ಯ (ರಾಣಿ) ಮಾಚಯ್ಯರನ್ನು ಸನ್ಮಾನಿಸಿರುವದು ಅತೀವ ಸಂತೋಷ ತಂದಿದೆ ಎಂದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೆಮಿಫೈನಲ್ ಪಂದ್ಯವನ್ನು ಉದ್ಘಾಟಿಸಿದರು.
ವಿವಿಧ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಊರುಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕ್ರೀಡಾ ಪ್ರೇಮಿಗಳಿಗೆ ರಸದೌತಣವನ್ನು ನೀಡಿದರು. ಸಂಜೆ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ನೃತ್ಯ ಕಾರ್ಯಕ್ರಮ ಗ್ರಾಮಸ್ಥರ ಮನ ರಂಜಿಸಿತು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಸದಸ್ಯರು ಗಳಾದ ಅಂಬೇಕಲ್ ಚಂದ್ರಶೇಖರ್, ಬಿ.ಈ. ಸತೀಶ್, ಜಂಗಲ್ ಕ್ಯಾಂಪ್ ರೆಸಾರ್ಟ್ ಮಾಲೀಕ ಮದನ್, ಕಾವೇರಿ ಮೀನುಗಾರರ ಸಂಘದ ಅಧ್ಯಕ್ಷ ಈ.ಎಸ್. ಶ್ರೀನಿವಾಸ್, ಕರ್ನಾಟಕ ರಾಜ್ಯದ ಮಾಜಿ ಹಾಕಿ ಕ್ಯಾಪ್ಟನ್ ಅಂದಗೋವೆಯ ಕಿರಣ್, ಕಾಫಿ ಬೆಳೆಗಾರ ಎ.ಆರ್. ಪಾಪಣ್ಣ, ಎ.ಪಿ. ಶಾಂತಪ್ಪ, ಎ.ಪಿ. ಧರ್ಮಪ್ಪ, ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಶಂಕರನಾರಾಯಣ, ಪ್ರಧಾನ ಕಾರ್ಯದರ್ಶಿ ಬಿ.ಎ. ವಸಂತ, ಗೌರವಾಧ್ಯಕ್ಷ ಕೆ.ಎಸ್. ವಿನೋದ್, ಸಹ ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ಪಿ.ಎಸ್. ಅನಿಲ್ ಕುಮಾರ್, ಕ್ರೀಡಾ ಕಾರ್ಯದರ್ಶಿ ರವಿ, ಸಾಂಸ್ಕøತಿಕ ಕಾರ್ಯದರ್ಶಿ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
ಕ್ಲಬ್ನ ಮಾಜಿ ಅಧ್ಯಕ್ಷ ಮಹಮ್ಮದ್ ಸ್ವಾಗತಿಸಿ, ಮಾಜಿ ಅಧ್ಯಕ್ಷ ಅಜಿತ್ ಸಾಂಸ್ಕøತಿಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.