ನಾಪೆÇೀಕ್ಲು, ಫೆ. 28: ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಬಳಿ ಗ್ರಾಮಕ್ಕೆ ತೆರಳುವ ಅಡ್ಡ ರಸ್ತೆಯ ಬದಿಯಲ್ಲಿ ಸಮಾರು ಒಂದು ತಿಂಗಳಿನಿಂದ ಬೊಲೇರೊ ಜಿಎಲ್ಎಕ್ಷ್ ಜೀಪನ್ನು ನಿಲುಗಡೆಗೊಳಿಸಿರುವದು ಕಂಡುಬಂದಿದೆ. ಜೀಪ್ನ ಮುಂಭಾಗದ ನೋಂದಾವಣೆ ಸಂಖ್ಯೆ (ಕೆಎ 01 ಎಂಬಿ 8001) ಆಗಿದ್ದು, ಹಿಂಭಾಗದಲ್ಲಿ ಎಂದು (ಕೆಎ 04 ಎಂಬಿ 8001) ಎಂದು ಬದಲಾವಣೆಗೊಳಿಸಿರುವದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಪೊಲೀಸ್ ಇಲಾಖೆಯ ಗಮನ ಸೆಳೆಯಲಾಗಿದೆ. ಪೆÇಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆ ಬಳಿಕವಷ್ಟೇ ಜೀಪು ಮಾಲೀಕರು ಯಾರು ಹಾಗೂ ಯಾವ ಕಾರಣಕ್ಕೆ ಅಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಯಬೇಕಿದೆ.