ಮಡಿಕೇರಿ, ಫೆ. 27 : ಕನ್ನಡ ಚಲನಚಿತ್ರ ನಟ ಕೊಡಗು ಮೂಲದ ಭುವನ್ ಪೊನ್ನಣ್ಣ ಚಿತ್ರವೊಂದರ ಶೂಟಿಂಗ್ ವೇಳೆ ಗಾಯಗೊಂಡಿರುವ ಘಟನೆ ನಡೆದಿದೆ. ಭುವನ್ ನಾಯಕನಟನಾಗಿ ಅಭಿನಯಿಸುತ್ತಿರುವ ರಾಂಧÀವ ಚಿತ್ರದ ಚಿತ್ರೀಕರಣ ಹೆಸರಘಟ್ಟ ಸಮೀಪ ಶಿವಕೋಟೆಯಲ್ಲಿ ನಡೆಯುತ್ತಿದ್ದು, ಸ್ಟಂಟ್ ಮಾಡುವ ವೇಳೆ ಬಿದ್ದು ಮೂಗು ಹಾಗೂ ಬೆನ್ನಿನ ಭಾಗಕ್ಕೆ ಗಾಯವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.