ಮಡಿಕೇರಿ, ಫೆ. 27: ಜಿಲ್ಲೆಯಾದ್ಯಂತ ಉಪಯೋಗಿಸುತ್ತಿ ರುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಮಡಿಕೇರಿ ಇವರಿಂದ ಸತ್ಯಾಪನೆ ಮುದ್ರೆ ಮಾಡಿಸಿಕೊಳ್ಳುವದು ಸರಕಾರದ ಕಾನೂನಿನ ಪ್ರಕಾರ ಕಡ್ಡಾಯ ವಾಗಿರುತ್ತದೆ. ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಮತ್ತು ಅಳತೆ, ತೂಕದ ಸಾಧನಗಳನ್ನು ಉಪಯೋಗಿ ಸುವವರ ಅನುಕೂಲಕ್ಕಾಗಿ ಇಲಾಖೆಯಿಂದ ಜಿಲ್ಲೆಯಾದ್ಯಂತ ತಾತ್ಕಾಲಿಕ ಶಿಬಿರ ಏರ್ಪಡಿಸಲಾಗಿದೆ.

ತಾ. 27 ರಿಂದ (ಇಂದಿನಿಂದ) ಕಾವೇರಿ ಕಾಫಿ ಡಿಪೋ ಎದುರು, ಬೈಪಾಸ್ ರಸ್ತೆ, ಗೋಣಿಕೊಪ್ಪದಲ್ಲಿ ಶಿಬಿರ ಆರಂಭವಾಗಿದ್ದು, ಮಾರ್ಚ್ 15 ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.