ಕೂಡಿಗೆ, ಫೆ. 27 : ಸೀಗೆಹೊಸೂರು ಮತ್ತು ಹುಣಸೆಪಾರೆ ಹಾಡಿ ವ್ಯಾಪ್ತಿಯಲ್ಲಿ ಬೆಳಗ್ಗಿನ ಜಾವ ಚಿರತೆ ಪ್ರತ್ಯಕ್ಷಗೊಂಡಿದ್ದು, ಈ ವ್ಯಾಪ್ತಿಯ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಬೇರೆಡೆಯಿಂದ ಹಿಡಿದ ಚಿರತೆಯನ್ನು ಸಮೀಪದ ಬಾಣಾವರ ಅರಣ್ಯದಂಚಿಗೆ ಬಿಟ್ಟಿರುವದರಿಂದ ಈ ವ್ಯಾಪ್ತಿಯ ಅರಣ್ಯ ಪ್ರದೇಶವು ಭುವನಗಿರಿ, ಸೀಗೆಹೊಸೂರು ಮತ್ತು ಹುಣಸೆಪಾರೆಗೆ ಹೊಂದಿ ಕೊಂಡಂತಿರುವದರಿಂದ ಚಿರತೆಯು ಈ ಭಾಗಕ್ಕೆ ಬರುತ್ತಿದೆ.

ಅರಣ್ಯ ಇಲಾಖೆ ಚಿರತೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಸ್ಥಳೀಯ ಗ್ರಾಮಸ್ಥರಾದ ಬೊಮ್ಮಯ್ಯನ ಚಿಣ್ಣಪ್ಪ, ಮಂಜಯ್ಯ, ದಿನೇಶ್, ನಾಗರಾಜ್, ಸೋಮಣ್ಣ ಆಗ್ರಹಿಸಿದ್ದಾರೆ.