ನಾಪೋಕ್ಲು, ಫೆ. 27: ಸಮೀಪದ ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಆಂದೋಲನವನ್ನು ಏರ್ಪಡಿಸಲಾಗಿತ್ತು. ಕಕ್ಕಬೆ ಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಸಿಗರು ಎಸೆದಿದ್ದ ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ಕಕ್ಕಬೆ-ಕುಂಜಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಶಿಕ್ಷಕ ವೃಂದದವರು ಹಾಗೂ ಗ್ರಾಮ ಪಂಚಾಯಿತಿ, ಗ್ರಾಮಸ್ಥರು ಪಾಲ್ಗೊಂಡಿದ್ದರು. ಸ್ವಚ್ಛತಾ ಆಂದೋಲನದಲ್ಲಿ ಸಂಗ್ರಹಿಸಲಾದ ಕಸ-ಕಡ್ಡಿ, ತ್ಯಾಜ್ಯಗಳನ್ನು ಸಾಗಾಟ ಮಾಡಲು ಕಾಫಿ ಬೆಳೆಗಾರ ಅರೆಯಡ ಬೋಪಣ್ಣ ಮತ್ತು ಸಹೋದರರು ಟ್ರ್ಯಾಕ್ಟರನ್ನು ಉಚಿತವಾಗಿ ನೀಡಿ ಸಹಕರಿಸಿದರು.