ಶನಿವಾರಸಂತೆ, ಫೆ. 27: ಪಟ್ಟಣದ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ ವತಿಯಿಂದ ರುದ್ರಭೂಮಿಯ ಪೂಜಾಕಟ್ಟೆ ಹಾಗೂ ಆವರಣವನ್ನು ಇತ್ತೀಚೆಗೆ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭ ರುದ್ರಭೂಮಿ ಸಮಿತಿ ಖಜಾಂಚಿ ಎಸ್.ಎಸ್. ದಿವಾಕರ್ ಮಾತನಾಡಿ, ರುದ್ರಭೂಮಿಯಲ್ಲಿ ಈಗಾಗಲೇ ನೂತನವಾಗಿ ಪೂಜಾಕಟ್ಟೆ, ಸುಡುವ ಯಂತ್ರ, ಸೌದೆ ಕೊಠಡಿಯನ್ನು ನಿರ್ಮಿಸಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳ ಸಹಕಾರದಿಂದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ರುದ್ರಭೂಮಿ ಸುತ್ತ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಅವರು ತಿಳಿಸಿದರು.
ರುದ್ರಭೂಮಿ ಸಮಿತಿ ಅಧ್ಯಕ್ಷ ಕೆ.ಪಿ. ಶಿವಪ್ಪ, ಉಪಾಧ್ಯಕ್ಷ ಬಿ.ಕೆ. ಚಂದ್ರಶೇಖರ್, ನಿರ್ದೇಶಕರಾದ ಎಸ್.ಎಸ್. ಗಣೇಶ್, ಲಿಂಗಪ್ಪ, ವಿ.ಕೆ. ರಮೇಶ್, ಮಲ್ಲೇಶ್, ವಸಂತ್, ರಮೇಶ್, ಬಿ.ಬಿ. ನಾಗರಾಜ್ ಇದ್ದರು.